ನೀವು ಸೇವಿಸುವ ಪ್ರತಿಯೊಂದು ಆಹಾರಕ್ಕೂ ನಿಮ್ಮ ಆರೋಗ್ಯಕ್ಕೂ ಸಂಬಂಧವಿದೆ. ನೀವು ಸೇವಿಸುವ ಕೆಲವೊಂದು ಆಹಾರಗಳು ನಿಮ್ಮ ನಪುಂಸಕತೆಗೆ ಕಾರಣವಾಗುತ್ತದೆ ಎಂದ್ರೆ ನೀವು ನಂಬಲೇಬೇಕು. ಹಾಗಾಗಿ ಆ ಆಹಾರಗಳಿಂದ ದೂರ ಇರುವುದು ಒಳ್ಳೆಯದು.
ಕೆಫೀನ್ ಹೆಚ್ಚು ಸೇವನೆ ಮಾಡುವುದರಿಂದ ಪುರುಷರಿಗೆ ನಪುಂಸಕತೆ ಕಾಡುತ್ತದೆ. ಹಾಗಾಗಿ ಕಾಫಿ ಸೇರಿದಂತೆ ಕೆಫೀನ್ ಅಂಶ ಜಾಸ್ತಿ ಇರುವ ಆಹಾರದಿಂದ ದೂರವಿರಿ.
ಧೂಮಪಾನ ಕೇವಲ ನಿಮ್ಮ ಲಿವರ್ ಹಾಳು ಮಾಡುವುದಿಲ್ಲ. ಬದಲಾಗಿ ಇದು ನಿಮ್ಮ ನಪುಂಸಕತೆಗೂ ಕಾರಣವಾಗುತ್ತದೆ. ಧೂಮಪಾನ ಮಾಡುವುದರಿಂದ ರಕ್ತ ಸಂಚಾರ ನಿಧಾನವಾಗುತ್ತದೆ. ಅದ್ರಿಂದ ಸುಸ್ತು ಜಾಸ್ತಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರು ಜಂಕ್ ಫುಡ್, ಹುಳಿ, ಬಿಸಿಬಿಸಿಯಾದ, ಹೆಚ್ಚು ಉಪ್ಪಿರುವ ಆಹಾರವನ್ನು ಹೆಚ್ಚಿಗೆ ಸೇವನೆ ಮಾಡ್ತಾರೆ. ಇದ್ರ ಜಾಸ್ತಿ ಸೇವನೆಯಿಂದ ವೀರ್ಯಾಣು ಕಡಿಮೆಯಾಗಿ ನಪುಂಸಕತೆ ಕಾಡುತ್ತದೆ.
ಅಧಿಕ ಮದ್ಯಪಾನ ಕೂಡ ನಪುಂಸಕತೆಗೆ ಮೂಲ ಕಾರಣವಾಗುತ್ತದೆ.
ಹಾಗೆ ಹೆಲ್ತ್ ಸಪ್ಲಿಮೆಂಟ್ ಕೂಡ ನಪುಂಸಕತೆಯನ್ನು ಹೆಚ್ಚಿಸುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ. ಈ ಸಪ್ಲಿಮೆಂಟ್ ಗಳು ಪುರುಷರ ಲೈಂಗಿಕ ಹಾರ್ಮೋನ್ ಹಾಗೂ ಸಂತಾನೋತ್ಪತ್ತಿ ಮೇಲೆ ದುಷ್ಪರಿಣಾಮ ಬೀರುತ್ತದೆ.