ಈಜುಕೊಳದಲ್ಲಿ ಸ್ನಾನ ಮಾಡುವ ಅಭ್ಯಾಸ ನಿಮಗಿದ್ದರೆ ಅವಶ್ಯವಾಗಿ ಈ ವಿಷಯ ತಿಳಿದುಕೊಳ್ಳಿ. ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಕಾರ ಈಜುಕೊಳದ ನೀರು ಜೀವ ತೆಗೆಯುವಷ್ಟು ಅಪಾಯಕಾರಿಯಂತೆ.
ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಕಾರ ಈಜುಕೊಳದ ನೀರು ಅತ್ಯಂತ ಅಪಾಯಕಾರಿಯಂತೆ. ಈ ನೀರಿನಲ್ಲಿರುವ ಬ್ಯಾಕ್ಟೀರಿಯಾ ಅನೇಕ ರೀತಿಯ ರೋಗಕ್ಕೆ ಕಾರಣವಾಗುತ್ತದೆ. ನೀರಿನಿಂದ ಬರುವ ವಾಸನೆ ಕ್ಲೋರಿನ್ ವಾಸನೆ ಎಂದುಕೊಳ್ಳುತ್ತಾರೆ. ಕ್ಲೋರಿನ್ ಜೊತೆಗೆ ಮಲ, ಮೂತ್ರ ಹಾಗೂ ಧೂಳು ಸೇರಿ ವಿಭಿನ್ನ ರಾಸಾಯನಿಕವಾಗಿ ಪರಿವರ್ತನೆಯಾಗುತ್ತದೆ.
ಈಜುಕೊಳದಲ್ಲಿ ಸ್ನಾನ ಮಾಡಿದ ನಂತ್ರ ಕಣ್ಣು ಕೆಂಪಾಗಿ ಉರಿ ಕಾಣಿಸಿಕೊಂಡರೆ ಅದು ಕ್ಲೋರಿನ್ ನಿಂದಲ್ಲ. ನೀರಿನಲ್ಲಿರುವ ಮೂತ್ರದಿಂದ. ಇದು ಅಲರ್ಜಿಯನ್ನುಂಟು ಮಾಡುತ್ತದೆ. ವೈದ್ಯರ ಪ್ರಕಾರ ಕ್ಲೋರಿನ್ ಗೆ ಮೂತ್ರ ಸೇರಿದಾಗ ಅಮೋನಿಯಾ ಉತ್ಪತ್ತಿಯಾಗುತ್ತದೆ. ಇದನ್ನು ಕ್ಲೋರಮೈನ್ ಎಂದು ಕರೆಯುತ್ತಾರೆ. ಇದ್ರ ವಾಸನೆ ಬೇರೆಯಾಗಿರುತ್ತದೆ. ಇದು ಉಸಿರಾಟದ ಜೊತೆಗೆ ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಕೆಲವೊಮ್ಮೆ ಇದು ಪ್ರಾಣಕ್ಕೆ ಕುತ್ತು ತರುತ್ತದೆ.