ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಗ್ಗೆ ಜಾಗ್ರತೆ ಇರಲಿ. ಯಾಕಂದ್ರೆ ಹ್ಯಾಕರ್ ಗಳಿಗೆ ನಿಮ್ಮ ಕಾರ್ಡ್ ಗೆ ಕನ್ನ ಹಾಕಲು ಕೇವಲ 6 ಸೆಕೆಂಡ್ ಗಳು ಸಾಕು. ನಿಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಂಬರ್, ಎಕ್ಸ್ ಪೈರಿ ದಿನಾಂಕ, ಸೆಕ್ಯೂರಿಟಿ ಕೋಡ್ ಇವನ್ನೆಲ್ಲ ತಿಳಿದುಕೊಳ್ಳಲು ಹ್ಯಾಕರ್ ಗಳಿಗೆ 6 ಸೆಕೆಂಡ್ ಸಾಕು ಎನ್ನುತ್ತಾರೆ ವಿಜ್ಞಾನಿಗಳು.
ವಿಶ್ವವಿದ್ಯಾನಿಲಯವೊಂದು ಈ ಬಗ್ಗೆ ಸಂಶೋಧನೆ ನಡೆಸಿತ್ತು. ಹ್ಯಾಕರ್ ಗಳು ಪೇಮೆಂಟ್ ನ ಡೇಟಾ ಪಡೆಯಲು ಮಾಡುವ ಕಸರತ್ತನ್ನು ಪತ್ತೆ ಮಾಡಲು ನೆಟ್ವರ್ಕ್ ಅಥವಾ ಬ್ಯಾಂಕ್ ಗಳಿಂದ ಸಾಧ್ಯವಿಲ್ಲ ಅನ್ನೋದು ಸಂಶೋಧಕರ ಅಭಿಪ್ರಾಯ. ಅದರಲ್ಲೂ ನೀವು ಲ್ಯಾಪ್ ಟಾಪ್ ಹಾಗೂ ಇಂಟರ್ನೆಟ್ ಕನೆಕ್ಷನ್ ಹೊಂದಿದ್ರೆ ಹ್ಯಾಕರ್ ಗಳಿಗೆ ಕೆಲಸ ಇನ್ನೂ ಈಸಿಯಾಗಿಬಿಡುತ್ತೆ.
ಯಾಕಂದ್ರೆ ವಿಭಿನ್ನ ವೆಬ್ ಸೈಟ್ ಗಳಿಂದ ಮಲ್ಟಿಪಲ್ ಇನ್ ವ್ಯಾಲಿಡ್ ಪೇಮೆಂಟ್ ರಿಕ್ವೆಸ್ಟ್ ಬಂದ್ರೆ ಆನ್ ಲೈನ್ ಪೇಮೆಂಟ್ ಸಿಸ್ಟಮ್ ಅದನ್ನು ಪತ್ತೆ ಮಾಡುವುದಿಲ್ಲ. ಆನ್ ಲೈನ್ ಖರೀದಿ ವೇಳೆ ಬೇರೆ ಬೇರೆ ವೆಬ್ ಸೈಟ್ ಗಳು ವಿಭಿನ್ನ ರೀತಿಯಲ್ಲಿ ಕಾರ್ಡ್ ವ್ಯಾಲಿಡೇಶನ್ ಗೆ ಮಾಹಿತಿ ಕೇಳುವುದರಿಂದ ಹ್ಯಾಕರ್ ಗಳನ್ನು ಹಿಡಿಯುವುದು ಕಷ್ಟ. ಕಡಿಮೆ ಅಂದ್ರೂ 10-20 ಬಾರಿ ಅವರು ಪ್ರಯತ್ನಿಸುತ್ತಾರೆ. ಡೇಟಾವನ್ನು ಊಹಿಸಲು ಹ್ಯಾಕರ್ ಗಳು ಆನ್ ಲೈನ್ ವೆಬ್ ಸೈಟ್ ಗಳ ಮೊರೆ ಹೋಗ್ತಾರೆ. ಡೇಟಾ ಗೆಸ್ ಮಾಡಿ ವಹಿವಾಟು ನಡೆಸ್ತಾರೆ, ಅದಕ್ಕೆ ಬರುವ ರಿಪ್ಲೈ ನೋಡಿ ಅದು ಸರಿಯಾಗಿದ್ಯೋ ಇಲ್ವೋ ಅನ್ನೋದನ್ನು ಖಚಿತಪಡಿಸಿಕೊಳ್ತಾರೆ.