ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರುವ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿದೆ ಎಂದು ನೀವು ಭಾವಿಸುವುದು ತಪ್ಪು. ನಿಮ್ಮ ವೈಯಕ್ತಿಕ ಡೇಟಾ ವಂಚಕರ ಕೈಸೇರುವ ಅಪಾಯ ಇದ್ದೇ ಇದೆ. ಏಕೆಂದರೆ Android ಮತ್ತು iOS ಡಿವೈಸ್‌ಗಳನ್ನು ಹ್ಯಾಕ್ ಮಾಡುವ ಸ್ಪೈವೇರ್ ಕಂಪನಿಯೇ ಇದೆ. ಕಂಪನಿ ಬಳಕೆದಾರರ ಡೇಟಾ ಕದಿಯುವ ಕೆಲಸವನ್ನು ರಹಸ್ಯವಾಗಿ ಮಾಡುತ್ತದೆ.
ಯಾವುದೇ ವ್ಯಕ್ತಿ ಈ ಕಂಪನಿಗೆ ಹಣ ಕೊಟ್ಟು ವೈಯಕ್ತಿಕ ಮಾಹಿತಿಯನ್ನು ಪಡೆಯಬಹುದು. Intellexa ಎಂಬ ಹೆಸರಿನ ಸ್ಪೈವೇರ್ ಸಂಸ್ಥೆ ಈ ದಂಧೆ ನಡೆಸ್ತಾ ಇದೆ. Android ಮತ್ತು iOS ಡಿವೈಸ್‌ಗಳಿಗೆ ಸುಲಭವಾಗಿ ಪ್ರವೇಶಿಸಿ ಬಳಕೆದಾರರ ಮಾಹಿತಿಯನ್ನು ಹ್ಯಾಕ್ ಮಾಡುವುದೇ ಈ ಕಂಪನಿಯ ಕೆಲಸ. ಈ ಹ್ಯಾಕಿಂಗ್‌ಗೆ ಪ್ರತಿಯಾಗಿ ಕಂಪನಿ ಭಾರೀ ಮೊತ್ತವನ್ನು ವಸೂಲಿ ಮಾಡುತ್ತದೆ.
ಹ್ಯಾಕಿಂಗ್‌ಗಾಗಿ ಈ ಕಂಪನಿ ಸುಮಾರು 64 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತದೆ ಎನ್ನಲಾಗ್ತಿದೆ. ಒಮ್ಮೆ ಮೊತ್ತವನ್ನು ಪಾವತಿಸಿದರೆ, 10 ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳನ್ನು ಇವರು ಹ್ಯಾಕ್ ಮಾಡಿಬಿಡ್ತಾರೆ. ಈ ಕಂಪನಿಯು iOS 15.4.1 ಮತ್ತು ಇತ್ತೀಚಿನ Android 12 ಅನ್ನು ಸುಲಭವಾಗಿ ಟಾರ್ಗೆಟ್ ಮಾಡಬಲ್ಲದು. ದೊಡ್ಡ ದೊಡ್ಡ ನಾಯಕರು ಮತ್ತು ಸೆಲೆಬ್ರಿಟಿಗಳ ಡಿವೈಸ್‌ಗಳು ಹ್ಯಾಕ್ ಆಗುವ ಅಪಾಯ ಹೆಚ್ಚು.