ಅಮೆರಿಕನ್ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ನ ಕೆಲವು ಉತ್ಪನ್ನಗಳಲ್ಲಿ ಬೆಂಜೀನ್ ಕಂಡುಬಂದಿದೆ. ಇದು ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆಯಿದೆ. ಹಾಗಾಗಿ ಕಂಪನಿ ತನ್ನ ಸನ್‌ಸ್ಕ್ರೀನ್ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಸುದ್ದಿ ಸಂಸ್ಥೆ ಎಪಿ ಪ್ರಕಾರ, ಸನ್‌ಸ್ಕ್ರೀನ್ ಉತ್ಪನ್ನಗಳನ್ನು ಆಂತರಿಕವಾಗಿ ಪರೀಕ್ಷಿಸಿದಾಗ, ಅವುಗಳಲ್ಲಿ ಸಣ್ಣ ಪ್ರಮಾಣದ ಬೆಂಜೀನ್ ಇರುವುದು ಕಂಡುಬಂದಿದೆ.
ಸನ್ ಸ್ಕ್ರೀನ್ ಉತ್ಪನ್ನಗಳನ್ನು ತಯಾರಿಸುವಾಗ ಬೆಂಜೀನ್ ಬಳಸುವುದಿಲ್ಲವೆಂದು ಕಂಪನಿ ಹೇಳಿಕೊಂಡಿದೆ. ಅವೆನೊ ಪ್ರೊಟೆಕ್ಟ್ + ರಿಫ್ರೆಶ್ ಏರೋಸಾಲ್ ಸನ್‌ಸ್ಕ್ರೀನ್(Aveeno Protect + Refresh Aerosol Sunscreen), ಬೀಚ್ ಡಿಫೆನ್ಸ್ ಏರೋಸಾಲ್ ಸನ್‌ಸ್ಕ್ರೀನ್( Beach Defense Aerosol Sunscreen), ಕೂಲ್‌ಡ್ರೈ ಸ್ಪೋರ್ಟ್ ಏರೋಸಾಲ್ ಸನ್‌ಸ್ಕ್ರೀನ್ (CoolDry Sport Aerosol Sunscreen), ಇನ್ವಿಸಿಬಲ್ ಡೈಲಿ ಡಿಫೆನ್ಸ್ ಏರೋಸಾಲ್ ಸನ್‌ಸ್ಕ್ರೀನ್ (Invisible Daily Defense Aerosol Sunscreen), ಅಲ್ಟ್ರಾಶೀರ್ ಏರೋಸಾಲ್ ಸನ್‌ಸ್ಕ್ರೀನ್( UltraSheer Aerosol Sunscreen) ಇದ್ರಲ್ಲಿ ಸೇರಿದೆ.
ಈ ಉತ್ಪನ್ನಗಳನ್ನು ವಾಪಸ್ ಪಡೆಯಲಾಗ್ತಿದೆ. ಈಗಾಗಲೇ ಇದನ್ನು ಖರೀದಿ ಮಾಡಿರುವ ಗ್ರಾಹಕರಿಗೆ ಹಣ ವಾಪಸ್ ನೀಡುವುದಾಗಿ ಕಂಪನಿ ಹೇಳಿದೆ. ಈ ಉತ್ಪನ್ನಗಳನ್ನು ಬಳಸದಂತೆ ಕಂಪನಿ ಹೇಳಿದೆ. ಜಾನ್ಸನ್ ಆಂಡ್ ಜಾನ್ಸನ್ ಪೌಂಡರ್ ನಿಂದ ಕ್ಯಾನ್ಸರ್ ಬರುತ್ತೆ ಎಂಬ ಆರೋಪವನ್ನು ಈಗಾಗಲೇ ಕಂಪನಿ ಎದುರಿಸುತ್ತಿದೆ.