ಆಹಾರ ಸೇವನೆಗೂ ಒಂದು ಪದ್ಧತಿಯಿದೆ. ತಪ್ಪಾದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಯಾವ ಹಣ್ಣು, ತರಕಾರಿ, ಆಹಾರವನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದನ್ನು ತಿಳಿದಿರಬೇಕು. ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ನಾವು ಕೆಲ ಆಹಾರ ಸೇವನೆ ಮಾಡಿದ್ರೆ ಅದು ನಮ್ಮ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.
ಪೊಟ್ಯಾಸಿಯಮ್ ಯುಕ್ತ ಆಹಾರ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಖಾಲಿ ಹೊಟ್ಟೆಯಲ್ಲಿ ಇದನ್ನು ಎಂದೂ ಸೇವನೆ ಮಾಡಬಾರದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿದ್ರೆ ಸಮಸ್ಯೆಗೆ ಕಾರಣವಾಗುತ್ತದೆ. ಮೈಗ್ರೇನ್ ಅಥವಾ ಆಮ್ಲೀಯತೆ ಸಮಸ್ಯೆಯಿರುವವರಿಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವನೆ ಮಾಡುವುದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ.
ಸೂಪರ್ ಫುಡ್ ಗಳಲ್ಲಿ ಬಾಳೆ ಹಣ್ಣು ಕೂಡ ಒಂದು. ಆದ್ರೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಬಾರದು. ಬಾಳೆ ಹಣ್ಣಿನಲ್ಲಿ ಮೆಗ್ನೀಸಿಯಮ್ ಹಾಗೂ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿಂದ್ರೆ ರಕ್ತ ಸೇರುವ ಮೆಗ್ನೀಸಿಯಮ್ ಹಾಗೂ ಪೊಟ್ಯಾಸಿಯಂ ಸಮಸ್ಯೆಗೆ ಕಾರಣವಾಗುತ್ತದೆ.
ಹುಳಿ ಹಣ್ಣು ಹಾಗೂ ಮೊಸರನ್ನು ಕೂಡ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಹುಳಿ ಹಣ್ಣುಗಳನ್ನು ಯಾವಾಗ್ಲೂ ಆಹಾರ ಸೇವನೆ ಮಾಡಿದ ನಂತ್ರ ತಿನ್ನಬೇಕು. ಹಾಗೆ ಮೊಸರನ್ನು ಕೂಡ ಆಹಾರ ಸೇವನೆ ಮಾಡಿದ ನಂತ್ರ ತೆಗೆದುಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ರೆ ಆಮ್ಲೀಯ ಪ್ರಮಾಣ ಹೆಚ್ಚಾಗುತ್ತದೆ.
ಟೊಮ್ಯಾಟೋ ಹಾಗೂ ಕಾಫಿ ಕೂಡ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಒಳ್ಳೆಯದಲ್ಲ. ಅಜೀರ್ಣ, ಆಮ್ಲೀಯ ಸಮಸ್ಯೆ ಇದ್ರಲ್ಲಿ ಕಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಸೇವನೆ ಮಾಡಿದ್ರೆ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆ.