alex Certify ಎಚ್ಚರ……! ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಮೊದಲು ದೇಹದ ಈ 3 ಭಾಗಗಳಲ್ಲಿ ಕಂಡು ಬರುತ್ತವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ……! ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಮೊದಲು ದೇಹದ ಈ 3 ಭಾಗಗಳಲ್ಲಿ ಕಂಡು ಬರುತ್ತವೆ

ಕೆಟ್ಟ ಆಹಾರ ಮತ್ತು ಅವ್ಯವಸ್ಥೆಯ ಜೀವನಶೈಲಿ ಜನರನ್ನು ರೋಗಗಳ ಸುಳಿಯಲ್ಲಿ ಸಿಲುಕಿಸಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಅಧಿಕ ಕೊಲೆಸ್ಟ್ರಾಲ್‌ನಿಂದ ತೊಂದರೆಗೊಳಗಾಗುತ್ತಿದ್ದಾರೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ, ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ಇದನ್ನು ಎಚ್‌ಡಿಎಲ್ ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್ ಎಂದೂ ಕರೆಯಲಾಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಅನೇಕ ಕಾಯಿಲೆಗಳು ಬರುವ  ಅಪಾಯವಿರುತ್ತದೆ. ಅದಕ್ಕಾಗಿಯೇ ದೇಹದಲ್ಲಿ ಸಮತೋಲಿತ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದು ಬಹಳ ಮುಖ್ಯ.

ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ, ರಕ್ತದ ಹರಿವಿಗೆ ಸಮಸ್ಯೆಯಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದೆ ಅನ್ನೋದನ್ನು ತಿಳಿದುಕೊಳ್ಳುವುದು ಹೇಗೆ? ಕೆಲವೊಂದು ನಿರ್ದಿಷ್ಟ ಲಕ್ಷಣಗಳ ಮೂಲಕ ನಾವು ಈ ಬಗ್ಗೆ ಸೂಚನೆ ಪಡೆಯಬಹುದು. ದೇಹದ ಕೆಲವು ಭಾಗಗಳಲ್ಲಿ ಅದರ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಕೂಡಲೇ ಎಚ್ಚೆತ್ತುಕೊಂಡು ಅದನ್ನು ನಿಯಂತ್ರಿಸಬಹುದು.

ಕಣ್ಣಿನ ಸಂಕೇತಗಳು: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದರ ಚಿಹ್ನೆಗಳನ್ನು ಕಣ್ಣುಗಳಲ್ಲಿ ಕಾಣಬಹುದು. ದೃಷ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇದು ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಂಕೇತವಾಗಿದೆ ಎಂದು ಅರ್ಥಮಾಡಿಕೊಳ್ಳಿ. ವಾಸ್ತವವಾಗಿ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ವ್ಯಕ್ತಿಯಲ್ಲಿ ಕಣ್ಣುಗಳ ಕಾರ್ನಿಯಾದ ಹೊರ ಭಾಗದಲ್ಲಿ ಮೇಲೆ ಮತ್ತು ಕೆಳಭಾಗದಲ್ಲಿ ನೀಲಿ ಅಥವಾ ಬಿಳಿ ಬಣ್ಣದ ಗುಮ್ಮಟದ ಆಕಾರವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ಕೈಗಳಲ್ಲಿ ನೋವು : ಕೈಗಳಲ್ಲಿ ಕಾಣಿಸಿಕೊಳ್ಳುವ ನೋವು ಕೂಡ ಅಧಿಕ ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು. ನಿಮ್ಮ ಕೈಗಳಲ್ಲಿ ಆಗಾಗ ನೋವು ಬರುತ್ತಿದ್ದರೆ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ವಾಸ್ತವವಾಗಿ  ಸೆಲ್ಯುಲಾರ್ ತ್ಯಾಜ್ಯ, ಕೊಬ್ಬು ಸಮೃದ್ಧ ಪದಾರ್ಥಗಳು ಮತ್ತು ಕ್ಯಾಲ್ಸಿಯಂನಿಂದ ಮಾಡಲ್ಪಟ್ಟ ಪದಾರ್ಥಗಳಿಂದ ಕೊಲೆಸ್ಟ್ರಾಲ್‌ ಜಾಸ್ತಿಯಾಗುತ್ತದೆ. ಅಪಧಮನಿಗಳ ಒಳ ಪದರದಲ್ಲಿ ಪ್ಲೇಕ್ ಅಂದರೆ ಕೊಬ್ಬು ಸಂಗ್ರಹವಾದಾಗ ರಕ್ತದ ಹರಿವಿಗೆ  ಅಡಚಣೆಯಾಗುತ್ತದೆ. ಇದರಿಂದಾಗಿ ಕೈಗಳಲ್ಲಿ ನೋವು ಬರುತ್ತದೆ.

ಚರ್ಮದ ಮೇಲೆ ಕಲೆ ಅಥವಾ ಗುರುತು: ಕೊಲೆಸ್ಟ್ರಾಲ್‌ ಅತಿಯಾದಾಗ ಚರ್ಮದಲ್ಲೂ ಬದಲಾವಣೆಗಳಾಗುತ್ತವೆ. ಉದಾಹರಣೆಗೆ ಕಣ್ಣುಗಳ ಕೆಳಭಾಗದ ಚರ್ಮ ಸ್ವಲ್ಪ ಹಳದಿಯಾಗಬಹುದು. ಕೆಲವರ ಕಣ್ಣುಗಳ ಕೆಳಗೆ ರೇಖೆಗಳು ಮೂಡುತ್ತವೆ. ಇದಲ್ಲದೇ ಅಂಗೈ ಮತ್ತು ಪಾದದ ಕೆಳಭಾಗದಲ್ಲಿ ಈ ರೀತಿಯ ಬಣ್ಣ ಅಥವಾ ಗೆರೆ ಕಂಡರೆ ಅದನ್ನು ಲಘುವಾಗಿ ಪರಿಗಣಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...