alex Certify ‘ಎಕ್ಸ್‌ಪೈರಿ ಡೇಟ್’ ಮುಗಿದ ಆಹಾರವನ್ನು ಸೇವಿಸುವುದರಿಂದ ಆಗಬಹುದು ಇಂಥಾ ಪರಿಣಾಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಎಕ್ಸ್‌ಪೈರಿ ಡೇಟ್’ ಮುಗಿದ ಆಹಾರವನ್ನು ಸೇವಿಸುವುದರಿಂದ ಆಗಬಹುದು ಇಂಥಾ ಪರಿಣಾಮ….!  

ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಬಹುತೇಕ ಆಹಾರ ಪದಾರ್ಥಗಳ ಮೇಲೆ ಮುಕ್ತಾಯ ದಿನಾಂಕವನ್ನು ಬರೆದಿರುತ್ತಾರೆ. ಎಷ್ಟೋ ಸಲ ನಮಗೆ ಗೊತ್ತಿಲ್ಲದೆಯೇ ಎಕ್ಸ್‌ಪೈರಿ ಡೇಟ್ ಆಗಿರುವ ಆಹಾರಗಳನ್ನು ತಿನ್ನುತ್ತೇವೆ. ಇದರ ಪರಿಣಾಮ ಏನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.  ಎಕ್ಸ್‌ಪೈರಿ ಡೇಟ್‌ ಆಗಿರುವ ಆಹಾರ ಪದಾರ್ಥಗಳನ್ನು ತಿನ್ನುವುದು ವಿಭಿನ್ನ ಜನರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ.

ಇದು ಕೆಲವೊಮ್ಮೆ ಯಾವುದೇ ಅಡ್ಡ ಪರಿಣಾಮ ಬೀರದೆಯೂ ಇರಬಹುದು. ಸಾಮಾನ್ಯವಾಗಿ ಬಹುತೇಕರು ಎಕ್ಸ್‌ಪೈರಿ ಡೇಟ್‌ ಆಗಿರುವ ಫುಡ್‌ ಅನ್ನೂ ಎಸೆಯುವುದಿಲ್ಲ. ಅದರ ವಾಸನೆಯನ್ನು ನೋಡುತ್ತಾರೆ. ವಾಸನೆ ಸರಿಯಾಗಿದ್ದರೆ ನಿರ್ಭಯವಾಗಿ ಸೇವಿಸುತ್ತಾರೆ. ಕೆಲವು ಆಹಾರ ಪದಾರ್ಥಗಳ ಮುಕ್ತಾಯ ದಿನಾಂಕವು ಸಾಕಷ್ಟು ಗೊಂದಲಮಯವಾಗಿದೆ ಎಂದು ಅನೇಕ ಆಹಾರ ತಜ್ಞರು ಹೇಳುತ್ತಾರೆ.

ಎಕ್ಸ್‌ಪೈರಿ ಡೇಟ್‌ ಆದ ನಂತರವೂ ಅವುಗಳನ್ನು ತಿನ್ನುವುದರಿಂದ ಯಾವುದೇ ಹಾನಿ ಇಲ್ಲ. ಆದಾಗ್ಯೂ ಮುಕ್ತಾಯ ದಿನಾಂಕ ಮುಗಿದ ನಂತರ ಅದನ್ನು ತಿನ್ನುವ ಅಪಾಯವನ್ನು ತೆಗೆದುಕೊಳ್ಳಬಾರದು. ಎಕ್ಸ್‌ಪೈರಿ ಆದ ತಿನಿಸುಗಳ ಸೇವನೆಯಿಂದ ಹಾನಿಕಾರಕ ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರಬಹುದು. ಇದರಿಂದ ಜ್ವರ, ಭೇದಿ, ವಾಂತಿ ಸಮಸ್ಯೆಯೂ ಬರಬಹುದು.

ಎಕ್ಸ್‌ಪೈರಿ ಡೇಟ್‌ ಮುಗಿದ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗದೇ ಇದ್ದರೂ ಅದರ ಪೌಷ್ಟಿಕಾಂಶದ ಮೌಲ್ಯವು ಕಡಿಮೆಯಾಗಿರುತ್ತದೆ. ಇದು ಮೊದಲಿನಷ್ಟು ತಾಜಾ ಮತ್ತು ಆರೋಗ್ಯಕರವಾಗಿರುವುದಿಲ್ಲ. ಆದರೆ ಇದರ ಕೆಟ್ಟ ಪರಿಣಾಮಗಳು ಕೆಲವರಲ್ಲಿ ಕಾಣಿಸಿಕೊಳ್ಳಬಹುದು, ಇನ್ನು ಕೆಲವರಲ್ಲಿ ಯಾವುದೇ ಪರಿಣಾಮ ಉಂಟಾಗದೇ ಇರಬಹುದು. ಆದರೂ ಎಕ್ಸ್‌ಪೈರಿ ಮುಗಿದ ನಂತರ ಆಹಾರ ಪದಾರ್ಥಗಳನ್ನು ತಿನ್ನುವ ರಿಸ್ಕ್‌ ತೆಗೆದುಕೊಳ್ಳಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...