ಪಂಜಾಬ್‌ನಲ್ಲಿ ಎಎಪಿ ಶಾಸಕಿಯೊಬ್ಬರಿಗೆ ಆಕೆಯ ಪತಿ ಕಪಾಳಕ್ಕೆ ಬಾರಿಸಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಜುಲೈ 10ರಂದು ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ತಲ್ವಂಡಿ ಸಾಬೋ ಕ್ಷೇತ್ರದ ಶಾಸಕಿಯಾಗಿರೋ ಬಲ್ಜಿಂದರ್ ಕೌರ್ ಮತ್ತು ಆಕೆಯ ಪತಿ ಮಧ್ಯೆ ವಾಗ್ವಾದ ನಡೆಯುತ್ತಿತ್ತು.
ಕೋಪದಲ್ಲಿ ಎದ್ದು ನಿಂತ ಪತಿ, ಕೌರ್ ಕೆನ್ನೆಗೆ ಬಾರಿಸಿದ್ದಾನೆ. ಆತ ಕೂಡ ಆಪ್ ಪಕ್ಷದ ಮುಖಂಡ. ಘಟನೆಗೆ ಸಾಕ್ಷಿಯಾದ ಕೆಲವರು ಕೂಡಲೇ ಜಗಳ ಬಿಡಿಸಲು ಮುಂದಾಗಿದ್ದಾರೆ. ಇಬ್ಬರನ್ನೂ ದೂರ ಸರಿಸಿ ಸಂಧಾನಕ್ಕೆ ಯತ್ನಿಸಿದ್ದಾರೆ.
ಪತಿಯಿಂದ ಕಪಾಳಮೋಕ್ಷಕ್ಕೊಳಗಾಗಿರುವ ಶಾಸಕಿ ಯಾವುದೇ ದೂರು ದಾಖಲಿಸಿಲ್ಲ. ಘಟನೆ ಬಗ್ಗೆ ಪ್ರತಿಕ್ರಿಯೆ ಕೂಡ ನೀಡಿಲ್ಲ. ವಿಡಿಯೋ ವೀಕ್ಷಿಸಿದ ಪಂಜಾಬ್‌ನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನಿಶಾ ಗುಲಾಟಿ, ಘಟನೆಯ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ. 2019ರ ಫೆಬ್ರವರಿಯಲ್ಲಿ ಬಲ್ಜಿಂದರ್ ಕೌರ್, ಮಜಾ ಪ್ರದೇಶದ ಎಎಪಿ ಯುವ ವಿಭಾಗದ ಸಂಚಾಲಕನನ್ನು ವಿವಾಹವಾಗಿದ್ದರು. ಕೌರ್ 2009 ರಲ್ಲಿ ಪಟಿಯಾಲದ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ M.Phil ಪೂರೈಸಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಆಕೆ ಫತೇಘರ್ ಸಾಹಿಬ್‌ನಲ್ಲಿರುವ ಮಾತಾ ಗುಜ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದರು.