ಶ್ರೀ ಗಣೇಶನ ದರ್ಶನದಿಂದ ಎಲ್ಲ ಪಾಪಗಳು ಪರಿಹಾರವಾಗುವ ಜೊತೆಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಎಲ್ಲ ಬಗೆಯ ಸುಖ, ಸಂತೋಷವನ್ನು ನೀಡುವ ದೇವರು ಗಣೇಶ ಎಂದು ನಂಬಲಾಗಿದೆ.
ಭಕ್ತರನ್ನು ರಕ್ಷಿಸುವ ಗಣಪತಿ ಶತ್ರುಗಳನ್ನು ನಾಶ ಮಾಡ್ತಾನೆ. ನಿತ್ಯ ಆತನ ದರ್ಶನ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಎಲ್ಲ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತವೆ. ಆದ್ರೆ ಗಣೇಶನ ಹಿಂಬದಿಯನ್ನು ಮಾತ್ರ ನೋಡಬಾರದು.
ಗಣೇಶನ ಹಿಂಭಾಗ ನೋಡುವುದನ್ನು ಶಾಸ್ತ್ರಗಳಲ್ಲಿ ನಿಷೇಧಿಸಲಾಗಿದೆ. ಗಜಮುಖನ ಶಾರೀರಿಕ ಅಂಗವು ತನ್ನದೇ ಆದ ಮೌಲ್ಯ ಮತ್ತು ವಿಶಿಷ್ಠತೆಗಳಿಂದ ಕೂಡಿದೆ. ಆನೆ ತಲೆಯಲ್ಲಿ ವಿವೇಚನೆ, ಬುದ್ಧಿವಂತಿಕೆ ಅಡಗಿದೆ. ದಂತ, ಸಾಮರ್ಥ್ಯವನ್ನು ಸೂಚಿಸುತ್ತದೆ. ಕಿವಿ ವಿವೇಕದ ಸಂಕೇತ. ಹೀಗೆ ಪ್ರತಿಯೊಂದು ಭಾಗದಲ್ಲಿಯೂ ಜೀವನ ಹಾಗೂ ಬ್ರಹ್ಮಾಂಡದ ಅಂಶಗಳು ಅಡಗಿವೆ.
ಆದ್ರೆ ಗಣೇಶನ ಹಿಂಭಾಗದಲ್ಲಿ ದಾರಿದ್ರ್ಯ ನೆಲೆಸಿದೆಯಂತೆ. ಗಣೇಶನ ಹಿಂಭಾಗವನ್ನು ದರ್ಶನ ಮಾಡುವ ವ್ಯಕ್ತಿ ಎಂತಹ ಶ್ರೀಮಂತನಾಗಿರಲಿ ಆತನಿಗೆ ಬಡತನ ಬರಲಿದೆಯಂತೆ. ಹಾಗಾಗಿ ಗಣೇಶನ ಹಿಂಭಾಗವನ್ನು ನೋಡುವಂತಿಲ್ಲ. ಗೊತ್ತಿಲ್ಲದೆ ನೋಡಿದಲ್ಲಿ ಗಣೇಶನಿಗೆ ಕ್ಷಮೆ ಕೋರಿ, ಪ್ರಾರ್ಥನೆ ಮಾಡಿದ್ರೆ ಎಲ್ಲ ಪಾಪಗಳು ಪರಿಹಾರವಾಗಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.