ಸನಾತನ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಸಂಸಾರದಲ್ಲಿ ದಾನಕ್ಕಿಂತ ಶ್ರೇಷ್ಠವಾದ ಕೆಲಸ ಯಾವುದೂ ಇಲ್ಲ. ಹಬ್ಬ, ಸಮಾರಂಭ, ಉಪವಾಸದ ವೇಳೆ ದಾನ ಮಾಡಿದ್ರೆ ದೇವಾನುದೇವತೆಗಳು ಖುಷಿಯಾಗ್ತಾರೆಂಬ ನಂಬಿಕೆಯಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ದಾನ ಮಾಡಬಾರದು. ಇದ್ರಿಂದ ಪುಣ್ಯಕ್ಕಿಂತ ಪಾಪ ಪ್ರಾಪ್ತಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತು ಹಾಗೂ ಚೀಲವನ್ನು ಹೆಚ್ಚಾಗಿ ಬಳಸ್ತಾರೆ. ಆದ್ರೆ ಸ್ವಂತಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿ ಮಾಡಿ. ದಾನದ ರೂಪದಲ್ಲಿ ಪ್ಲಾಸ್ಟಿಕ್ ನೀಡಬೇಡಿ. ಇದು ಕುಟುಂಬದ ಉನ್ನತಿ ಹಾಗೂ ವ್ಯಾಪಾರ, ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಪೊರಕೆ ದಾನ ಮಾಡುವುದರಿಂದ ಹಣ ಸಂಬಂಧಿಕರ ಹಾಗೆ ಬರುತ್ತದೆ. ಕೈನಲ್ಲಿ ಹಣ ನಿಲ್ಲುವುದಿಲ್ಲ. ಲಕ್ಷ್ಮಿ ಸದಾ ಮುನಿಸಿಕೊಳ್ತಾಳೆ.
ಸ್ಟೀಲ್ ಪಾತ್ರೆಯನ್ನು ದಾನ ಮಾಡುವುದು ಶುಭವಲ್ಲ. ಸ್ಟೀಲ್ ಪಾತ್ರೆ ದಾನ ಮಾಡುವುದರಿಂದ ಮಕ್ಕಳು ಹಾಗೂ ಪಾಲಕರ ನಡುವೆ ಸಂಬಂಧ ಹದಗೆಡುತ್ತದೆ. ಮನೆಯಲ್ಲಿ ಖುಷಿ ಎಂದೂ ನೆಲೆಸಿರುವುದಿಲ್ಲ.
ನೀವು ಧರಿಸಿದ ಉಡುಪನ್ನು ಕಡು ಬಡವರಿಗೆ ಮಾತ್ರ ದಾನ ನೀಡಿ. ಅಪ್ಪಿ-ತಪ್ಪಿಯೂ ಉಳ್ಳವರಿಗೆ ದಾನ ಮಾಡಬೇಡಿ.
ತಾಜಾ ಆಹಾರವನ್ನು ದಾನವಾಗಿ ನೀಡುವುದು ಬಹಳ ಒಳ್ಳೆಯದು. ಆದ್ರೆ ಹಳಸಿದ ಆಹಾರ ದಾನ ಮಾಡುವುದರಿಂದ ಲಕ್ಷ್ಮಿ ಮುನಿಸಿಕೊಳ್ತಾಳೆ.
ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕ, ಗ್ರಂಥಗಳನ್ನು ದಾನ ಮಾಡುವುದು ಪುಣ್ಯದ ಕೆಲಸ. ಆದ್ರೆ ಪುಸ್ತಕ ಹಾಳಾಗಿದ್ದರೆ ಅದನ್ನು ದಾನವಾಗಿ ನೀಡಬೇಡಿ.
ಚೂಪಾದ ಹಾಗೂ ಆಯುಧಗಳನ್ನು ದಾನ ರೂಪದಲ್ಲಿ ನೀಡುವುದರಿಂದ ದುರಾದೃಷ್ಟ ನಿಮ್ಮ ಬೆನ್ನು ಬಿಡುವುದಿಲ್ಲ.