
ತಮಿಳುನಾಡಿನ ಕೊಲ್ಲಿ ಹಿಲ್ಸ್ ರಸ್ತೆಯ ಚಿತ್ರಣವನ್ನು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ನೋಡಲು ಹೇರ್‌ಪಿನ್ ಬೆಂಡ್‌ಗಳಂತೆ ಕಾಣುವ ರಸ್ತೆಯ ಅದ್ಭುತ ಫೋಟೋವನ್ನು ಹಂಚಿಕೊಂಡಿದ್ದು, ಭಾರತದ ಬಗ್ಗೆ ನಮಗೆ ತಿಳಿದಿರುವುದು ಕಡಿಮೆ ಎಂದು ಬರೆದಿದ್ದಾರೆ.
ಈ ಫೋಟೋವನ್ನು ನಾರ್ವೇಜಿಯನ್ ಸರ್ಕಾರದ ಮಾಜಿ ಸಚಿವ ಎರಿಕ್ ಸೋಲ್ಹೈಮ್ ಅವರು ಮೊದಲಿಗೆ ಹಂಚಿಕೊಂಡಿದ್ದಾರೆ. ನಮ್ಮ ದೇಶದ ಬಗ್ಗೆ ತನಗೆ ಎಷ್ಟು ಕಡಿಮೆ ತಿಳಿದಿದೆ ಎಂಬುದನ್ನು ಎರಿಕ್ ನೀವು ತನಗೆ ತೋರಿಸುತ್ತಿದ್ದೀರಿ..! ಇದು ಕೇವಲ ಅಸಾಧಾರಣವಾಗಿದೆ. ಈ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆಂದು ಕಂಡುಹಿಡಿಯಲು ಬಯಸುವುದಾಗಿ ಟ್ವಿಟ್ಟರ್ ನಲ್ಲಿ ಮಹೀಂದ್ರಾ ತಿಳಿಸಿದ್ದಾರೆ.
ಕೈಗಾರಿಕೋದ್ಯಮಿ ಹಂಚಿಕೊಂಡಿರುವ ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು, ಕೊಲ್ಲಿ ಬೆಟ್ಟ ಪ್ರದೇಶದ ಸುಂದರ ನೋಟಗಳನ್ನು ಹಂಚಿಕೊಳ್ಳಲು ಜನರನ್ನು ಪ್ರೇರೇಪಿಸಿದೆ. ಭಾರತವು ಎಷ್ಟು ವಿಶಾಲವಾಗಿದೆ ಮತ್ತು ವೈವಿಧ್ಯಮಯವಾಗಿದೆ ಎಂದು ನೆಟ್ಟಿಗರು ಕೂಡ ಟ್ವೀಟ್ ಮಾಡಿದ್ದಾರೆ. ಆಸಕ್ತಿದಾಯಕ ದೃಶ್ಯ ಕಂಡ ಜನರು ಆಶ್ಚರ್ಯಚಕಿತರಾಗಿದ್ದಂತೂ ಸುಳ್ಳಲ್ಲ.