ಪ್ರತಿಯೊಬ್ಬ ಹೆಣ್ಣಿಗೂ ಋತುಸ್ರಾವದ ಅವಧಿಯಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಬಹುತೇಕ ಸಹಜ. ಈ ನೋವು ಋತುಚಕ್ರ ಶುರುವಾಗುವ ಒಂದೆರಡು ದಿನದ ಮೊದಲೇ ಆರಂಭವಾಗಿ ಮತ್ತೆರಡು ದಿನ ಮುಂದುವರಿಯುವುದುಂಟು. ಈ ನೋವನ್ನು ಕೆಲ ಮನೆಮದ್ದುಗಳಿಂದ ಕಡಿಮೆಗೊಳಿಸಬಹುದು.
ಕರಿಎಳ್ಳನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಹಾಕಿ ಕುಡಿಯಿರಿ. ದಿನಕ್ಕೆ ಎರಡು ಬಾರಿ ಸೇವಿಸಿದರೆ ಮುಟ್ಟಿನ ದಿನಗಳಲ್ಲಿ ಬರುವ ನೋವನ್ನು ನಿವಾರಿಸಬಹುದು. ಮೂರ್ನಾಲ್ಕು ಎಸಳುಗಳಷ್ಟು ಬೆಳ್ಳುಳ್ಳಿಯನ್ನು ಕತ್ತರಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ, ಶೋಧಿಸಿ ಕಾಲು ಲೋಟದಷ್ಟು ನೀರನ್ನು ಸೇವಿಸಿ. ದಿನಕ್ಕೆ ಎರಡು ಬಾರಿ ಸೇವಿಸಿ. ಮನೆಮದ್ದುಗಳ ಜೊತೆಗೆ ಹೆಚ್ಚಾಗಿ ಹಸಿರು ತರಕಾರಿ, ಹಣ್ಣು, ಹಾಲು, ಬಾದಾಮಿಗಳನ್ನು ತಿನ್ನಬೇಕು.
ಚಹಾ ಮತ್ತು ಕಾಫಿಯನ್ನು ಆದಷ್ಟು ಕಡಿಮೆ ಮಾಡಿ, ಜೊತೆಗೆ ಪುದೀನ ಸೊಪ್ಪು, ನಿಂಬೆಹಣ್ಣು, ಶುಂಠಿಯನ್ನು ಸೇವಿಸಿ. ಹಸಿ ಹಾಲಿನಲ್ಲಿ ಒಂದು ಚಿಟಿಕೆ ಅರಿಷಿಣ ಪುಡಿಯನ್ನು ಹಾಕಿ ಕುಡಿಯಿರಿ ಹೀಗೆ ಮಾಡುವುದರಿಂದ ಕೂಡ ಹೊಟ್ಟೆ ನೋವು ಕಡಿಮೆಯಾಗುತ್ತದೆ.