ತರಬೇತಿ ಸಂಸ್ಥೆಯೊಂದರಲ್ಲಿದ್ದ ವೇಳೆ ಋತುಸ್ರಾವಕ್ಕೆ ಒಳಗಾದ ಮಹಿಳೆಯೊಬ್ಬರು ತಮಗೆ ಆ ಸಂದರ್ಭದಲ್ಲಿ ನೆರವಿಗೆ ಬಂದ ಹುಡುಗನೊಬ್ಬನ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಆಯುಶ್ಕಾ ಹೆಸರಿನ ಈ ಮಹಿಳೆಗೆ ಋತುಸ್ರಾವವಾದ ವೇಳೆ ಸ್ಯಾನಿಟರಿ ನ್ಯಾಪ್ಕಿನ್‌ಗಳು ಅವರ ಬಳಿ ಇರಲಿಲ್ಲ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಹುಡುಗನೊಬ್ಬ ಆಯುಶ್ಕಾರ ಪರಿಸ್ಥಿತಿ ಅರ್ಥ ಮಾಡಿಕೊಂಡು, ತನ್ನ ಫೋನ್ ಬಳಸಿ ಹತ್ತಿರದಲ್ಲಿರುವ ಔಷಧದ ಅಂಗಡಿಯನ್ನು ಪತ್ತೆ ಮಾಡಿ, ತಾನೇ ಆಕೆಯನ್ನು ಕರೆದುಕೊಂಢು ಹೋಗಿ ಆಕೆಗೆ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಖರೀದಿಸಿ ಕೊಟ್ಟಿದ್ದಾನೆ. ಜೊತೆಗೆ ಒಂದು ಐಸ್ಕ್ರೀಂ ಸಹ ಆಕೆಗೆ ತೆಗೆದುಕೊಟ್ಟಿದ್ದಾನೆ.
ಸ್ತ್ರಿಯರ ಮನೋದೈಹಿಕ ವೇದನೆಗಳೆಡೆಗೆ ಸೂಕ್ಷ್ಮ ಗ್ರಹಿಕೆ ಮೂಡಿಸುವ ನಿಟ್ಟಿನಲ್ಲಿ ಅನುಕರಣೀಯವಾದ ಈ ಘಟನೆಯ ಕುರಿತು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ.
https://twitter.com/VineetaAhilani/status/1663872945016668160?ref_src=twsrc%5Etfw%7Ctwcamp%5Etweetembed%7Ctwterm%5E1663872945016668160%7Ctwgr%5E60491d6646a2a621fd3ca2e664b1f0f137d9c438%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fboy-buys-sanitary-napkins-and-ice-cream-for-classmate-in-pain-kind-people-exist-says-internet-2388719-2023-06-04