ಮಹಿಳೆಯರು 45 ವರ್ಷದ ಬಳಿಕ ಋತುಬಂಧಕ್ಕೆ ಒಳಗಾಗುತ್ತಾರೆ. ಇದರಿಂದ ಅವರಲ್ಲಿ ಹಾರ್ಮೋನ್ ಬದಲಾವಣೆಗಳಾಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ.
*ತೂಕ ಹೆಚ್ಚಾಗುವುದು : ಋತುಬಂಧದಿಂದ ಹಾರ್ಮೋನ್ ಬದಲಾವಣೆಯಾಗುವುದರಿಂದ ತೂಕ ಹೆಚ್ಚಳವಾಗುತ್ತದೆ. ಇದರಿಂದ ಸ್ತನ ಕ್ಯಾನ್ಸರ್, ಖಿನ್ನತೆ, ಹೃದ್ರೋಗ, ಮಧುಮೇಹ ಸಮಸ್ಯೆ ಕಾಡುತ್ತದೆ.
*ಕೂದಲು ತೆಳ್ಳಗಾಗುವುದು : ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದು ಕೂಡ ಹಾರ್ಮೋನ್ ಸಮಸ್ಯೆಯಿಂದ ಕಂಡುಬರುತ್ತದೆ. ಈಸ್ಟ್ರೋಜನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ. ರಕ್ತ ಸಂಚಾರ ಕೂಡ ಕಡಿಮೆಯಾಗಿ ಕೂದಲಿನ ಬುಡಕ್ಕೆ ರಕ್ತ ಹರಿವು ಕಡಿಮೆಯಾಗಿ ಕೂದಲು ಉದುರಿ ತೆಳ್ಳಗಾಗುತ್ತದೆ.
* ಋತುಬಂಧಕ್ಕೊಳಗಾದ ಮಹಿಳೆಯರ ಚರ್ಮ ಡ್ರೈ ಆಗುತ್ತದೆ. ಈಸ್ಟ್ರೋಜನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗಿ ಚರ್ಮವು ತೈಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮ ಒಣಗುತ್ತದೆ. ಬೇಗ ಸುಕ್ಕುಗಟ್ಟುತ್ತದೆ. ಹಾಗಾಗಿ ಮಾಯಿಶ್ವರೈಸರ್ ಬಳಸುತ್ತಿರಿ.