ಆಸ್ತಿ ಮಾರಾಟ ಮತ್ತು ನೋಂದಣಿ ವೇಳೆ ಋಣಬಾರ ಪ್ರಮಾಣ ಪತ್ರ (ಇಸಿ) ಮಹತ್ವದ ದಾಖಲೆಯಾಗಿದೆ. ಆದರೆ ಇದನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಪಡೆಯಲು ದಿನಗಟ್ಟಲೆ ಅಲೆಯಬೇಕಾಗುತ್ತದೆ.
ಇದೀಗ ಈ ಕುರಿತು ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ನೀಡಲಾಗಿದ್ದು, ಇನ್ನು ಮುಂದೆ ಮನೆಯಲ್ಲೇ ಕುಳಿತು ಋಣಭಾರ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ.
ಋಣಭಾರ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಸರ್ಕಾರಕ್ಕೆ ಪಾವತಿಸಬೇಕಾದ ನಿಗದಿತ ಶುಲ್ಕವನ್ನು ಕಟ್ಟಿದ ಬಳಿಕ ಆನ್ಲೈನ್ ಮೂಲಕವೇ ಋಣಭಾರ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮುಂದೆ ಕಿಯೋಸ್ಕ್ ಅಳವಡಿಸಲು ಸಿದ್ಧತೆ ನಡೆಸಲಾಗಿದ್ದು, ಅಲ್ಲಿಯೂ ಕೂಡ ಋಣಭಾರ ಪ್ರಮಾಣಪತ್ರದ ಪ್ರಿಂಟ್ ಪಡೆದುಕೊಳ್ಳಬಹುದಾಗಿದೆ.