
ಪ್ರತಿನಿತ್ಯ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಮಾಡುವ ಅಗತ್ಯವಿದೆ. ಹಿಂದೂ ಧರ್ಮದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮಾತೆ ಅನ್ನಪೂರ್ಣೆಗೆ ವಂದಿಸಿ ಆಹಾರ ಸೇವನೆ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಊಟಕ್ಕೆ ಅದರದೇ ಆದ ನಿಯಮಗಳಿವೆ. ಅವುಗಳನ್ನು ಪಾಲಿಸಿ ಊಟ ಮಾಡುವುದು ಒಳ್ಳೆಯದು.
ಕೆಲವರಿಗೆ ಹಾಸಿಗೆಯ ಮೇಲೆ ಕುಳಿತು ತಿನ್ನುವ ಅಭ್ಯಾಸವಿರುತ್ತದೆ. ಆಹಾರವನ್ನು ಎಂದಿಗೂ ಹಾಸಿಗೆಯ ಮೇಲೆ ಕುಳಿತು ತಿನ್ನಲೇಬಾರದು. ಈ ಅಭ್ಯಾಸ ನಿಮ್ಮಲ್ಲೂ ಇದ್ದರೆ ತಕ್ಷಣ ಅದನ್ನು ಬದಲಾಯಿಸಿಕೊಳ್ಳಿ. ಈ ಅಭ್ಯಾಸವು ದಾರಿದ್ರ್ಯದ ಸೂಚನೆಯಾಗಿದೆ.
ತಟ್ಟೆಯಲ್ಲಿ ಉಪ್ಪನ್ನು ಬಿಡುವುದು ತುಂಬಾ ಅಶುಭ ಎನ್ನತ್ತಾರೆ. ತಿನ್ನುವಾಗ ನಿಮ್ಮ ತಟ್ಟೆಯಲ್ಲಿ ಏನನ್ನೂ ಬಿಡಬೇಡಿ. ತಟ್ಟೆಯಲ್ಲಿ ಆಹಾರವನ್ನು ಬಿಡುವುದು ಒಳ್ಳೆಯ ಲಕ್ಷಣವಲ್ಲ. ತಾಯಿ ಅನ್ನಪೂರ್ಣೆಯು ಲಕ್ಷ್ಮಿ ದೇವಿಯ ರೂಪ. ಹಾಗಾಗಿ ಅಗತ್ಯವಿರುವಷ್ಟು ಆಹಾರ ಮಾತ್ರ ಹಾಕಿಕೊಳ್ಳಿ. ಬೇಕಿದ್ದರೆ ಮತ್ತೊಮ್ಮೆ ಹಾಕಿಸಿಕೊಳ್ಳಬಹುದು.
ಆಹಾರವನ್ನು ತಿನ್ನುವಾಗ ಯಾವಾಗಲೂ ಕುಳಿತುಕೊಂಡು ಊಟ ಮಾಡಿ. ಊಟ ಮಾಡುವಾಗ ಮೊಬೈಲ್, ಟಿ.ವಿ ನೋಡುವುದು ಅಥವಾ ಹೆಚ್ಚು ಮಾತನಾಡುವುದು ಮಾಡಬೇಡಿ. ಸಂತೃಪ್ತಿಯಿಂದ ಅಗತ್ಯವಿರುವಷ್ಟು ಊಟ ಮಾಡಿ.
ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಊಟದ ನಂತರ ತಕ್ಷಣ ಮಲಗಬೇಡಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಧ್ಯವಿದ್ದರೆ ಸ್ವಲ್ಪ ಹೊತ್ತು ವಾಕ್ ಮಾಡಿ.