‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅನ್ನೋ ಹಾಡು ಕೇಳಿರಬೇಕಲ್ಲ? ಸಾಮಾನ್ಯ ಮನುಷ್ಯನ ಮೊದಲ ಆದ್ಯತೆ ಮೂರು ಹೊತ್ತಿನ ಒಳ್ಳೆಯ ಊಟ, ನಿದ್ದೆ ಹಾಗೂ ಆರೋಗ್ಯ. ಈ ಮೂರು ಸರಿಯಾಗಿದ್ರೆ ಸ್ವರ್ಗನೇ ನಮ್ಮ ಕೈಲಿ ಇದೆ ಅಂತ ಅರ್ಥ.
ಊಟ ಅಂದಕೂಡಲೇ ಅದನ್ನ ತಿನ್ನೋಕೆ ಬೇಕಾದ ತಟ್ಟೆ ನೆನಪಾಗುತ್ತದೆ. ಊಟಕ್ಕೆ ಸ್ಟೀಲ್ ತಟ್ಟೆ ಹೊರತುಪಡಿಸಿದರೆ ಪ್ಲಾಸ್ಟಿಕ್ ಹಾಗೂ ಫೈಬರ್ ತಟ್ಟೆಗಳು ಹೇರಳವಾಗಿ ಬಳಕೆಯಾಗುತ್ತದೆ. ಆದರೆ ಇವ್ಯಾವುದೂ ಆರೋಗ್ಯಕ್ಕೆ ಅಷ್ಟು ಒಳ್ಳೇದಲ್ಲ. ಊಟಕ್ಕೆ ಎಲ್ಲಕ್ಕೂ ಬೆಸ್ಟ್ ಯಾವುದು ಗೊತ್ತೇ ?
ಸಾಂಪ್ರದಾಯಿಕವಾಗಿ ನಮ್ಮ ಬಾಳೆ ಎಲೆ ಊಟ ಎಲ್ಲಕ್ಕೂ ಬೆಸ್ಟ್. ಬಾಳೆ ಎಲೆಯಲ್ಲಿ ಬಿಸಿ ಬಿಸಿ ಆಹಾರ ಬಡಿಸಿದಾಗ ಒಂದು ದ್ರವ ಸ್ರವಿಸತ್ತೆ. ಅದು ಆರೋಗ್ಯಕ್ಕೆ ಬಹಳ ಒಳ್ಳೇದು.
ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು. ಹಾಗೆ ಇದರಲ್ಲಿ ಊಟ ಮಾಡುವಾಗ ಒಂದು ಹಿತವಾದ, ಸಂತೃಪ್ತ ಅನುಭವ ಸಿಗತ್ತೆ.
ತಟ್ಟೆಗಳನ್ನು ಸಾಮಾನ್ಯವಾಗಿ ಮಾರ್ಜಕ ಉಪಯೋಗಿಸಿ ತೊಳೆಯುವುದರಿಂದ ಸರಿಯಾದ ಪ್ರಮಾಣದಲ್ಲಿ ನೀರು ಬಳಸಿ ಸ್ವಚ್ಛಗೊಳಿಸದೆ ಇದ್ದರೆ ರಾಸಾಯನಿಕಗಳು ಹಾಗೆ ಉಳಿದುಬಿಡುವ ಸಾಧ್ಯತೆ ಇರುತ್ತದೆ. ಆದರೆ ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.