ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ.
ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು. ಊಟವಾದ ತಕ್ಷಣ ಯಾವ ಕೆಲಸಗಳನ್ನು ಮಾಡಬಾರದು ಅಂತಾ ನಾವು ಹೇಳ್ತೇವೆ.
ಚಹಾ ಸೇವನೆ ಬೇಡ : ಕೆಲವರಿಗೆ ಊಟದ ಜೊತೆ ಜೊತೆಗೆ ಚಹಾ ಕುಡಿಯುವ ರೂಢಿ ಇರುತ್ತದೆ. ಚಹಾದಲ್ಲಿ ಆಮ್ಲದ ಗುಣ ಜಾಸ್ತಿ ಇರುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಊಟವಾದ ಮೇಲೆ ಎರಡು ಗಂಟೆಗಳ ಕಾಲ ಚಹಾ ಸೇವಿಸಬೇಡಿ.
ಮಲಗಬೇಡಿ : ಊಟ ಜೀರ್ಣವಾಗಲು ಕೆಲವು ಸಮಯ ಬೇಕಾಗುತ್ತದೆ. ಹಾಗಾಗಿ ಊಟವಾದ ತಕ್ಷಣ ಮಲಗಬಾರದು. ಹಾಗೆ ಮಾಡಿದ್ರೆ ಗ್ಯಾಸ್ ಹಾಗೂ ಕರುಳಿನ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಸ್ನಾನ : ಊಟದ ನಂತರ ಸ್ನಾನ ಕೂಡ ಮಾಡಬಾರದು.
ಅಮಲಿನ ಪದಾರ್ಥ : ಸಿಗರೇಟು ಆರೋಗ್ಯಕ್ಕೆ ಹಾನಿಕರ. ಹೃದಯ ಹಾಗೂ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಊಟವಾದ ತಕ್ಷಣ ಧೂಮಪಾನ ಮಾಡಿದ್ರೆ ಅಪಾಯ 10 ಪಟ್ಟು ಹೆಚ್ಚು ಎನ್ನುತ್ತಾರೆ ವೈದ್ಯರು.
ಹಣ್ಣು : ಊಟವಾದ ತಕ್ಷಣ ಹಣ್ಣುಗಳನ್ನು ಸೇವಿಸಬಾರದು. ಅದರ ಪ್ರೋಟಿನ್ ದೇಹಕ್ಕೆ ಸರಿಯಾಗಿ ಸಿಗುವುದಿಲ್ಲ. ಊಟವಾದ ಒಂದು ಗಂಟೆ ನಂತರ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣು ಸೇವಿಸುವುದು ಉತ್ತಮ.