
ಹಿಂಸಾತ್ಮಕ ಘರ್ಷಣೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬೆಚ್ಚಿಬೀಳಿಸಿದೆ. ಖಾಸಗಿ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಊಟ ಬಡಿಸುವ ವಿಚಾರದಲ್ಲಿ ಶುರುವಾದ ಜಗಳ ನಂತರ ಉಲ್ಬಣಗೊಂಡಿತು.
ಎರಡೂ ಗುಂಪುಗಳು ಒಬ್ಬರನ್ನೊಬ್ಬರು ಬೆನ್ನಟ್ಟಿದ್ದರು. ಮರದ ದಿಮ್ಮಿಗಳಿಂದ ಹೊಡೆದಾಡಲು ಸಜ್ಜಾಗಿದ್ರು. ಮತ್ತೊಂದು ವೀಡಿಯೊದಲ್ಲಿ, ವಲಸೆ ಕಾರ್ಮಿಕರ ಗುಂಪಿನ ಮೇಲೆ ದಾಳಿ ಮಾಡುವಾಗ ಅವರು ಪ್ರಾಣ ಉಳಿಸಿಕೊಳ್ಳಲು ಮೇಜಿನ ಮೇಲೆ ಕುಳಿತಿರುವುದು ಕಂಡುಬಂದಿದೆ.
ವಿಡಿಯೋ ವೈರಲ್ ಆಗಿದ್ದರೂ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.