ಕೆಲವೊಮ್ಮೆ ಮನೆಯಲ್ಲಿ ಎಲ್ಲ ಇದ್ದರೂ ದರಿದ್ರ ಆವರಿಸಿಕೊಂಡವರ ಹಾಗೇ ಇರುತ್ತದೆ. ಎಷ್ಟೇ ದುಡಿದರೂ ಚಿಕ್ಕಾಸು ಉಳಿಯಲ್ಲ. ಹಾಗೇ ನೆಮ್ಮದಿ ಕೂಡ ಇರಲ್ಲ. ಇದಕ್ಕೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ ತಪ್ಪುಗಳೇ ಕಾರಣವಾಗುತ್ತದೆಯಂತೆ.
ಊಟ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸದೇ ಇದ್ದರೆ ಕಷ್ಟಗಳು ಕಾಡುತ್ತದೆಯಂತೆ. ಕೆಲವರು ಊಟ ಮಾಡುವಾಗ ಮಾತನಾಡುವುದು, ಜಗಳ ಮಾಡಿಕೊಳ್ಳುವುದು ಇನ್ನು ಕೆಲವರು ಕೋಪ ಮಾಡಿಕೊಳ್ಳುವುದನ್ನು ಮಾಡುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ಅನ್ನಪೂರ್ಣೇಶ್ವರಿ ಕೋಪಗೊಳ್ಳುತ್ತಾಳಂತೆ.
ಹಾಗೇ ಊಟ ಮಾಡುವಾಗ ಶುಚಿತ್ವ ಕೂಡ ತುಂಬಾ ಮುಖ್ಯವಾದದ್ದು. ಕೈ ಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕಂತೆ. ಹಾಗೇ ಊಟ ಮಾಡಿದ ಬಟ್ಟಲಿನಲ್ಲಿ ಯಾವುದೇ ಕಾರಣಕ್ಕೂ ಕೈ ತೊಳೆಯಬಾರದಂತೆ. ಈ ನಿಯಮಗಳನ್ನು ಪಾಲಿಸಿದರೆ ದೇವಿಯ ಅನುಗ್ರಹ ಸಿಕ್ಕಿ ಆರೋಗ್ಯ ಭಾಗ್ಯ ಕರುಣಿಸುತ್ತಾಳಂತೆ.