ಮಲಗಿ ಎದ್ದಾಗ, ಯಾವುದಾದರೂ ಕೆಲಸ ಮಾಡಿದಾಗ ದೇಹದ ಯಾವುದಾದರೊಂದು ಭಾಗ ಉಳುಕುವುದುಂಟು. ಇದರ ಪರಿಹಾರಕ್ಕೆ ವೈದ್ಯರ ಬಳಿ ತೆರಳುವ ಬದಲು ಒಂದಷ್ಟು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ತುಪ್ಪ ಮತ್ತು ಬೆಲ್ಲವನ್ನು ಬಿಸಿ ಮಾಡಿ ಮಿಕ್ಸ್ ಮಾಡಿ ಉಳುಕಿದ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಉಳುಕಿದ ನೋವು ನಿವಾರಣೆ ಆಗುತ್ತದೆ. ಹುಣಸೆ ಹಣ್ಣಿಗೆ ಸ್ವಲ್ಪ ನೀರು ಹಾಕಿ ಹದಕ್ಕೆ ಬರುವ ಹಾಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ಬಿಸಿ ಮಾಡಿ ಉಳುಕಿದ ಭಾಗಕ್ಕೆ ಹಚ್ಚುವುದರಿಂದ ಊತ, ಉರಿ, ನೋವು ಕಡಿಮೆಯಾಗುತ್ತದೆ.
ಇನ್ನು ಸ್ವಲ್ಪ ಬೆಲ್ಲದ ಜೊತೆಗೆ ಸ್ವಲ್ಪ ಸುಣ್ಣ ಬೆರೆಸಿ ಉಳುಕಿರುವ ಜಾಗಕ್ಕೆ ಹಚ್ಚುವುದರಿಂದ ಅದು ವಾಸಿಯಾಗುತ್ತದೆ. ಇಲ್ಲಿ ಸುಣ್ಣವನ್ನು ಹೆಚ್ಚಾಗಿ ಬಳಸಬಾರದು.
ಉಳುಕಿರುವ ಜಾಗಕ್ಕೆ ಬಿಸಿ ನೀರಿನಿಂದ ಶಾಖ ಕೊಡುವುದರಿಂದ ನೋವು ಕಡಿಮೆಯಾಗುತ್ತದೆ. ಒಂದು ಬಾಟಲ್ ನಲ್ಲಿ ಬಿಸಿ ನೀರು ಹಾಕಿ ಶಾಖ ಕೊಡಬಹುದು. ಉಳುಕಿರುವ ಜಾಗಕ್ಕೆ ಹೆಚ್ಚು ವಿಶ್ರಾಂತಿ ಅವಶ್ಯಕತೆ ಇರುತ್ತದೆ. ಆದ್ದರಿಂದ ಆ ಭಾಗಕ್ಕೆ ಜಾಸ್ತಿ ಒತ್ತಡವನ್ನು ಕೊಡಬಾರದು.