ಚಪಾತಿ ಅಥವಾ ರೋಟಿ ಭಾರತದ ಸಾಂಪ್ರದಾಯಿಕ ಆಹಾರಗಳಲ್ಲೊಂದು. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಚಪಾತಿ ಸೇವನೆ ಮಾಡಲಾಗುತ್ತದೆ. ನಿತ್ಯವೂ ಬಗೆಬಗೆಯ ಪಲ್ಯದ ಜೊತೆಗೆ ಚಪಾತಿ ಸವಿಯುವುದು ಸಾಮಾನ್ಯ.
ಕೆಲವೊಮ್ಮೆ ಊಟಕ್ಕಾಗಿ ಮಾಡಿದ ಚಪಾತಿ ಉಳಿದುಬಿಡುತ್ತದೆ. ಉಳಿದ ರೊಟ್ಟಿಗಳನ್ನು ಎಸೆಯಬೇಡಿ. ಅವುಗಳಿಂದ ಆರೋಗ್ಯಕರವಾದ ಚಿಪ್ಸ್ ಮಾಡಿ ತಿನ್ನಬಹುದು. ಲೆಫ್ಟ್ ಓವರ್ ಚಪಾತಿಯ ಚಿಪ್ಸ್ ಬಹಳ ರುಚಿಕರ. ಮಸಾಲೆ ಘಮದ ಜೊತೆಗೆ ಕುರುಕಲು ತಿನಿಸು ಬಹಳ ಚೆನ್ನಾಗಿರುತ್ತದೆ. ಇದನ್ನು ಮಾಡಲು ಕೇವಲ 5 ನಿಮಿಷಗಳು ಸಾಕು.
ಚಪಾತಿಯಿಂದ ಚಿಪ್ಸ್ ಮಾಡಲು ಬೇಕಾಗುವ ಸಾಮಗ್ರಿಗಳು
ಉಳಿದ ಚಪಾತಿ 1 ರಿಂದ 2, ಬ್ಲಾಕ್ ಸಾಲ್ಟ್ 1 ಚಮಚ, ಎಣ್ಣೆ 5 ಚಮಚ
ಚಪಾತಿ ಚಿಪ್ಸ್ ಮಾಡುವ ವಿಧಾನ
ಮೊದಲು ಚಪಾತಿಯನ್ನು ನೀರಿನಿಂದ ಸ್ವಲ್ಪ ಒದ್ದೆ ಮಾಡಿ.ನಂತರ 1 ರಿಂದ 2 ಚಮಚ ಎಣ್ಣೆಯನ್ನು ನಾನ್ ಸ್ಟಿಕ್ ಪ್ಯಾನ್‌ಗೆ ಹಾಕಿ ಬಿಸಿ ಮಾಡಿಕೊಳ್ಳಿ. ರೊಟ್ಟಿಯನ್ನು ಈ ಬಿಸಿ ಎಣ್ಣೆಯಲ್ಲಿ ಹಾಕಿ ಮತ್ತು ಗರಿಗರಿಯಾಗುವವರೆಗೆ ಎರಡೂ ಬದಿಗಳಿಂದ ಫ್ರೈ ಮಾಡಿ. ರೊಟ್ಟಿಯು ಪಾಪಡ್‌ನಂತೆಯೇ ಗರಿಗರಿಯಾಗಬೇಕು ಎಂಬುದನ್ನು ನೆನಪಿನಲ್ಲಿಡಿ.
ಈ ಹುರಿದ ರೊಟ್ಟಿಯನ್ನು ಪಾತ್ರೆಯೊಂದರಲ್ಲಿ ತೆಗೆಯಿರಿ. ಅದನ್ನು ಮಧ್ಯಮ ಗಾತ್ರದ ಸಮಾನ ತುಂಡುಗಳಾಗಿ ಕತ್ತರಿಸಿ. ನಂತರ ಅದಕ್ಕೆ ಬ್ಲಾಕ್ ಸಾಲ್ಟ್ ಮತ್ತು ಚಾಟ್ ಮಸಾಲಾ ಸಹ ಹಾಕಿಕೊಳ್ಳಬಹುದು. ಇದನ್ನು ಚಟ್ನಿ ಜೊತೆಗೆ ಅಥವಾ ಚಹಾ ಕಾಫಿ ಜೊತೆಗೆ ಸವಿಯಿರಿ.