ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ಸಿಗದಿದ್ದಾಗ ಅಥವಾ ಸೋಂಕು ಕಾಣಿಸಿಕೊಂಡಾಗ ಉರಿಮೂತ್ರ ಸಮಸ್ಯೆ ಕಂಡು ಬರುತ್ತದೆ.
ಇದರ ಪರಿಹಾರಕ್ಕೆ ಪ್ರತಿನಿತ್ಯ ದಾಳಿಂಬೆ ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಉರಿಮೂತ್ರ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ವಿಟಮಿನ್ ಸಿ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು, ದ್ರಾಕ್ಷಿ ಹಾಗೂ ಕೀವಿ ಹಣ್ಣುಗಳನ್ನು ತಿನ್ನುವುದರಿಂದ ಉರಿ ಮೂತ್ರವನ್ನು ನಿಯಂತ್ರಣಕ್ಕೆ ತರಬಹುದು.
ಅದರೊಂದಿಗೆ ಸಾಕಷ್ಟು ನೀರು ಸೇವನೆಯನ್ನು ಮಾಡಬೇಕು. ಇದರಿಂದ ದೇಹದಲ್ಲಿರುವ ಮೂತ್ರದ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಹೊರಹಾಕಿ ಮೂತ್ರಪಿಂಡವನ್ನು ಸಂರಕ್ಷಿಸಬಹುದು. ದೇಹಕ್ಕೆ ನೀರು ಅತಿ ಮುಖ್ಯವಾದ ಒಂದು ಅಂಶವಾದ್ದರಿಂದ ಹೆಚ್ಚು ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಬಹುದು.