ನೀವು ಉಷ್ಣ ದೇಹದವರೇ. ಬೇಸಿಗೆಯ ಬೇಗೆಯನ್ನು ತಾಳಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ. ಇದಕ್ಕೆ ಕಾರಣವಾಗುವ ಮುಖ್ಯ ಸಂಗತಿಗಳನ್ನು ತಿಳಿಯೋಣ.
ಹೆಚ್ಚಿನ ಮಸಾಲ ಪದಾರ್ಥಗಳನ್ನು ಸೇವಿಸುವುದರಿಂದ, ನೀರು ಕುಡಿಯದೆ ಹೆಚ್ಚು ಹೊತ್ತು ಕಳೆಯುವುದರಿಂದ, ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಹೆಚ್ಚಿ ನೋವಾಗುತ್ತದೆ.
ಜೀರಿಗೆ ಮತ್ತು ಬಿಳಿ ಕಲ್ಲು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿಕೊಳ್ಳಿ. ಡಬ್ಬದಲ್ಲಿ ಶೇಖರಣೆ ಮಾಡಿಡಿ. ಪ್ರತಿ ನಿತ್ಯ ಒಂದು ಚಮಚದಂತೆ ಇದನ್ನು ಸೇವಿಸಬೇಕು. ಇದರಿಂದ ಉಷ್ಣ ಸಂಬಂಧ ಸಮಸ್ಯೆಗಳು ದೂರವಾಗುತ್ತದೆ.
ಮಜ್ಜಿಗೆಯಲ್ಲಿ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ಸಹ ಈ ಸಮಸ್ಯೆ ದೂರವಾಗುತ್ತದೆ. ಮಕ್ಕಳಿಗೆ ಅತಿ ಉಷ್ಣ ಕಾರಣಗಳಿಂದ ಚರ್ಮದ ಮೇಲೆ ಗುಳ್ಳೆಗಳು ಮೂಡುತ್ತವೆ. ಇದರ ನಿವಾರಣೆಗೆ, ಎಳನೀರು, ಹಣ್ಣಿನ ರಸ ಸೇವಿಸಿ.