ಖಾರ ಮಸಾಲೆಯ ಊಟವಾದ ಬಳಿಕ ಮೂತ್ರ ಮಾಡುವಾಗ ಉರಿಯುವ ಲಕ್ಷಣವನ್ನು ಬಹುತೇಕ ಎಲ್ಲರೂ ಅನುಭವಿಸಿರುತ್ತಾರೆ. ಅದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಸಾಕಷ್ಟು ನೀರು ಕುಡಿಯುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ ಲಕ್ಷಣಗಳು ಕಂಡುಬರುತ್ತವೆ.
ಪ್ರೋಬಯೋಟಿಕ್ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ಇವು ನೋವು ಕಾರಕ ಬ್ಯಾಕ್ಟೀರಿಯಾಗಳನ್ನು ಕೊಂದು ಹಾಕುತ್ತವೆ. ಮೂತ್ರನಾಳದ ಸೋಂಕನ್ನು ಕಡಿಮೆ ಮಾಡುತ್ತದೆ.
ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಸಿಟ್ರಸ್ ಹಣ್ಣುಗಳು ಮತ್ತು ತರಕಾರಿಗೆ ನಿಮ್ಮ ಊಟದಲ್ಲಿ ಹೆಚ್ಚು ಅವಕಾಶ ಕೊಡಿ. ಏಲಕ್ಕಿಗೆ ಮೂತ್ರನಾಳದ ಸೋಂಕನ್ನು ಕಡಿಮೆ ಮಾಡುವ ಗುಣವಿದೆ. ಇದರಿಂದ ಕಿಡ್ನಿ ಉತ್ತಮವಾಗಿ ಕೆಲಸ ಮಾಡುತ್ತದೆ ಮಾತ್ರವಲ್ಲ ಹಲವು ಬ್ಯಾಕ್ಟೀರಿಯಾಗಳನ್ನು ಏಲಕ್ಕಿ ಸಾಯಿಸುತ್ತದೆ.
ಏಲಕ್ಕಿಯನ್ನು ನೀರಿನಲ್ಲಿ ನೆನೆ ಹಾಕಿಯೂ ತಿನ್ನಬಹುದು ಅಥವಾ ಅದರ ಕಷಾಯವನ್ನು ಕುಡಿಯಬಹುದು. ಲವಂಗದ ಎಣ್ಣೆಯೂ ಇದೇ ಪರಿಹಾರಗಳನ್ನು ನೀಡುತ್ತದೆ.