ಉಬ್ಬಸ ಬಹುತೇಕರನ್ನು ಕಾಡುವ ಒಂದು ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವ ಕಷಾಯವನ್ನು ಮಾಡುವ ವಿಧಾನ ತಿಳಿಯೋಣ.
ಉಸಿರಾಟದ ಎಲ್ಲಾ ಅಡೆತಡೆಗಳನ್ನು ದೂರ ಮಾಡುವ, ಎದೆ ಬಿಗಿತವನ್ನು ಸಡಿಲಿಸುವ ಗುಣ ಶುಂಠಿಗೆ ಇದೆ. ಹಾಗಾಗಿ ಒಂದು ಗ್ಲಾಸ್ ನೀರಿಗೆ ½ ಇಂಚು ಶುಂಠಿ, 4 ರಿಂದ 5 ಪುದಿನ ಎಲೆ, ಚಿಟಿಕೆ ಅರಿಶಿಣವನ್ನು ಬೆರೆಸಿ ಕುದಿಸಿ ಸೋಸಿ. ಇದಕ್ಕೆ ಕಾಲು ಚಮಚ ಕರಿಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 7 ದಿನಗಳವರೆಗೆ ಬೆಳಿಗ್ಗೆ ಕುಡಿಯಬೇಕು. ಬಳಿಕ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಬೇಕು.
ಊಟದಲ್ಲಿ ಉಪ್ಪಿನ ಬಳಕೆ ಕಡಿಮೆ ಮಾಡಿ, ಆಗಾಗ ಮೊಳಕೆ ಕಾಳುಗಳನ್ನು ತಿನ್ನಬೇಕು. ಆವಿ ತೆಗೆದುಕೊಳ್ಳುವಾಗ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಹಾಕಿ. ಇದರಿಂದ ಬೇಗನೆ ಆರಾಮ ಸಿಗುತ್ತದೆ. ಉಬ್ಬಸವೂ ಕಡಿಮೆ ಆಗುತ್ತದೆ. ಕರಿದ ತಿಂಡಿಗಳಿಂದ ದೂರವಿರಿ. ಬಿಸಿ ನೀರನ್ನು ಕುಡಿಯುತ್ತಾ ಇರಿ. ಇದರಿಂದ ಬೇಗನೆ ಶಮನವಾಗುತ್ತದೆ.