ಇತ್ತೀಚೆಗೆ ದಿನಗಳಲ್ಲಿ ಎಲ್ಲಾ ಆಹಾರಗಳಿಗೆ ಕಲಬೆರಕೆ ಮಾಡಲಾಗುತ್ತಿದೆ. ಆದರೆ ಉಪ್ಪಿಗೆ ಮಾತ್ರ ಕಲಬೆರಕೆ ಮಾಡುತ್ತಿರಲಿಲ್ಲ. ಆದರೆ ಸಂಶೋಧನೆಗಳ ಪ್ರಕಾರ ಈಗ ಉಪ್ಪಿಗೂ ಕೂಡ ಕಲಬೆರಕೆ ಮಾಡಲಾಗುತ್ತಿದೆ. ಹಾಗಾಗಿ ಉಪ್ಪು ಕಲಬೆರಕೆಯಾಗಿದೆಯೇ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ.
ಸಂಶೋಧರಕರ ಪ್ರಕಾರ ದೊಡ್ಡ ಕಂಪೆನಿಗಳು ಉಪ್ಪಿನ ಜೊತೆ ಪ್ಲಾಸ್ಟಿಕ್ ನ್ನು ಮಿಶ್ರಣ ಮಾಡುತ್ತಿದೆ ಎನ್ನಲಾಗಿದೆ. ಕೆಲವೊಮ್ಮೆ ಬಿಳಿ ಕಲ್ಲಿನ ಪುಡಿಯನ್ನು ಸಹ ಉಪ್ಪಿನಲ್ಲಿ ಸೇರಿಸುತ್ತಿದೆ. ಹಾಗಾಗಿ ಇದನ್ನು ಪರೀಕ್ಷಿಸಲು 1 ಗ್ಲಾಸ್ ನೀರಿಗೆ 1 ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಕಲಬೆರಕೆ ಮಾಡಿದ್ದರೆ ಕಲಬೆರಕೆ ಮಾಡಿದ ವಸ್ತು ತಳದಲ್ಲಿ ನಿಲ್ಲುತ್ತದೆ. ನೀರಿನ ಬಣ್ಣ ಬಿಳಿಯಾಗುತ್ತದೆ. ಒಂದು ವೇಳೆ ಉಪ್ಪು ಶುದ್ಧವಾಗಿದ್ದರೆ ನೀರಿನ ತಳಭಾಗದಲ್ಲಿ ಯಾವುದೇ ಕೊಳಕು ಇರುವುದಿಲ್ಲ.