ಉಪ್ಪು ಅತ್ಯವಶ್ಯ ವಸ್ತು. ಉಪ್ಪು ಇಲ್ಲದ ಮನೆಯಿಲ್ಲ. ಅಡುಗೆಗೆ ರುಚಿ ನೀಡುವ ವಸ್ತು ಉಪ್ಪು. ಅಡುಗೆಗೆ ಮಾತ್ರವಲ್ಲ, ವಾಸ್ತು ನಿವಾರಣೆಗೆ, ದುಷ್ಟ ಶಕ್ತಿಗಳ ದೃಷ್ಟಿ ನಿವಾರಣೆಗೆ, ಸೌಂದರ್ಯ ವರ್ಧಕವಾಗಿ ಹೀಗೆ ನಾನಾ ವಿಧವಾಗಿ ಇದನ್ನು ಬಳಸಲಾಗುತ್ತದೆ.
ವಾಸ್ತು ದೋಷವಿದ್ದರೆ ಅಂತಹ ಮನೆಯಲ್ಲಿ ಶಾಂತಿ, ನೆಮ್ಮದಿ ಇರುವುದಿಲ್ಲ. ವಾಸ್ತು ದೋಷ ನಿವಾರಣೆಗೆ ಮೂಲೆ ಮೂಲೆಯಲ್ಲಿ ಬಟ್ಟಲಿನಲ್ಲಿ ಉಪ್ಪನ್ನು ಹಾಕಿ ಇಡಬೇಕು. ಪ್ರತಿ ತಿಂಗಳಿಗೊಮ್ಮೆ ಬದಲಾಯಿಸಬೇಕು. ಹಾಗೆಯೇ ಮಲಗುವ ಕೋಣೆಯಲ್ಲಿ ಉಪ್ಪು ಇಟ್ಟು ಮಲಗಿದರೆ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ. ದೃಷ್ಟಿ ದೋಷ ನಿವಾರಿಸಲು ಒಂದು ಹಿಡಿ ಉಪ್ಪು, ಸ್ವಲ್ಪ ಒಣ ಮೆಣಸಿನಕಾಯಿ ಜೊತೆ ನಿವಾಳಿಸಿ ಬೆಂಕಿಯಲ್ಲಿ ಹಾಕಬೇಕು. ದುಷ್ಟಶಕ್ತಿಗಳ ನಿವಾರಣೆಗೆ ಒಂದು ಪಾತ್ರೆಯಲ್ಲಿ ಉಪ್ಪು ನೀರು ಹಾಕಿ ಕಾಲನ್ನು ಹತ್ತು ನಿಮಿಷಗಳ ಕಾಲ ಅದರಲ್ಲಿ ಇಟ್ಟುಕೊಳ್ಳಬೇಕು.
ಅಷ್ಟೇ ಅಲ್ಲ ಉಪ್ಪಿನ ನೀರಿನಿಂದ ನೆಲವನ್ನು ಸ್ವಚ್ಚಗೊಳಿಸಿದರೆ ಇರುವೆ, ನೊಣ ಬರುವುದಿಲ್ಲ. ಹಾಗೆಯೆ ನಕಾರಾತ್ಮಕ ಶಕ್ತಿ ದೂರ ಮಾಡಬಹುದು, ಉಪ್ಪನ್ನು ಸಂಪೂರ್ಣ ಖಾಲಿ ಮಾಡಿದರೆ ದಾರಿದ್ರ್ಯ ನಿಶ್ಚಿತ. ಆದ್ದರಿಂದ ಉಪ್ಪನ್ನು ಸಂಜೆ ವೇಳೆ ಖಾಲಿಯಾಗಿದೆ ಎಂದು ಹೇಳಬಾರದು. ಉಪ್ಪನ್ನು ಸದಾ ಮನೆಯಲ್ಲಿರುವಂತೆ ನೋಡಿಕೊಳ್ಳಬೇಕು.