ಉಪ್ಪಿನಕಾಯಿ ಇಷ್ಟಪಡದವರು ಯಾರು ಹೇಳಿ? ಆದರೆ ಅದನ್ನು ಸೇವಿಸುವ ವೇಳೆ ಈ ಕೆಲವು ವಿಚಾರಗಳನ್ನು ನೀವು ನೆನೆಪಿಟ್ಟುಕೊಳ್ಳುವುದು ಒಳ್ಳೆಯದು.
ಉಪ್ಪಿನಕಾಯಿಯಲ್ಲಿ ಉಪ್ಪು ಹಾಗು ಖಾರ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ದೀರ್ಘಕಾಲ ಅದು ಹಾಳಾಗಬಾರದು ಎಂಬುದೇ ಇದರ ಹಿಂದಿನ ಮುಖ್ಯ ಉದ್ದೇಶ.
ಇದನ್ನು ಇತಿಮಿತಿಯಲ್ಲಿ ಸೇವನೆ ಮಾಡುವುದು ಬಹಳ ಮುಖ್ಯ. ಹೆಚ್ಚು ಸೇವಿಸಿದರೆ ದೇಹದಲ್ಲಿ ನೀರಿನ ಅಂಶ ಹಾಗೆಯೇ ಉಳಿದು ರಕ್ತದೊತ್ತಡದಂಥ ಸಮಸ್ಯೆಗಳು ಕಾಣಿಸಿಕೊಂಡಾವು.
ಇನ್ನು ಮಳಿಗೆಗಳಿಂದ ತಂದ ಉಪ್ಪಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಎಣ್ಣೆಯಂಶ ಇರುತ್ತದೆ. ಕೆಡದಂತೆ ಉಳಿಯಲು ಬಳಸುವ ಈ ಆಯಿಲ್ ನಿಂದ ದೇಹದ ಕೊಲೆಸ್ಟ್ರಾಲ್ ಅಂಶ ವಿಪರೀತ ಹೆಚ್ಚುತ್ತದೆ. ಹೃದಯದ ಕಾಯಿಲೆ. ಲಿವರ್ ಕಾಯಿಲೆಗಳಿಗೆ ಇದುವೇ ಕಾರಣವಾಗಬಹುದು.
ಹೆಚ್ಚು ಎಣ್ಣೆಯ ಹಾಗೂ ಉಪ್ಪಿನ ಅಂಶ ಸೇವನೆಯೇ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಹಾಗೆಂದು ಉಪ್ಪಿನಕಾಯಿ ಸೇವನೆಯಿಂದ ಹಾನಿಗಳೇ ಆಗುತ್ತವೆ ಎಂಬರ್ಥವಲ್ಲ. ಅದನ್ನು ಹಿತಮಿತವಾಗಿ ಸೇವಿಸಿ ಆರೋಗ್ಯದ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ.