alex Certify ಉಪವಾಸ ಮಾಡಿದರೆ ಇಳಿಯದು ತೂಕ..….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಪವಾಸ ಮಾಡಿದರೆ ಇಳಿಯದು ತೂಕ..….!

ದೇಹ ತೂಕ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಉಪವಾಸ ಇರುವವರನ್ನು ನೀವು ಕಂಡಿರಬಹುದು. ಅದು ತಪ್ಪು, ಖಾಲಿ ಹೊಟ್ಟೆಯಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ.

ನಿಗದಿತ ಸಮಯಕ್ಕೆ ಊಟ ಮಾಡುವುದನ್ನು ತಪ್ಪಿಸಬೇಡಿ. ಆದರೆ ತಿನ್ನುವ ಪ್ರಮಾಣ ಕಡಿಮೆ ಮಾಡಿ. ಒಂದು ಬಟ್ಟಲು ಊಟ ಮಾಡುವವರು ಮೊದಲು ಅದನ್ನು ಅರ್ಧಕ್ಕೆ ಇಳಿಸಲು ಪ್ರಯತ್ನಿಸಿ. ಗಬ ಗಬನೆ ಊಟ ಮಾಡುವುದರ ಬದಲು ನಿಧಾನವಾಗಿ ತಿಂದರೆ ಬಹುಬೇಗ ತೂಕ ಇಳಿಸಬಹುದು ಎನ್ನುತ್ತದೆ ಸಂಶೋಧನೆ.
ವ್ಯಾಯಾಮ ತಪ್ಪಿಸದಿರಿ. ಬೆಳಗ್ಗೆದ್ದು ಬೆವರು ಹರಿಸಿ. ವಾಕಿಂಗ್ ಜಾಗಿಂಗ್ ಜೊತೆಗೆ ಮೆಟ್ಟಿಲು ಹತ್ತಿ ಇಳಿಯಿರಿ. ಬೆಳಗಿನ ಉಪಾಹಾರ ತಪ್ಪಿಸದಿರಿ.

ರಾತ್ರಿ ಮಲಗುವ ಕನಿಷ್ಠ ಎರಡರಿಂದ ಮೂರು ಗಂಟೆ ಮೊದಲೇ ಊಟ ಮಾಡಿ ಮುಗಿಸಿ. ನೀವು ಮಲಗುವ ವೇಳೆ ಸೇವಿಸಿದ ಆಹಾರ ಜೀರ್ಣಗೊಂಡಿರಲಿ. ಇದು ತೂಕ ಇಳಿಕೆಗೆ ಸಹಕಾರಿ.

ಸಸ್ಯಾಹಾರದೊಂದಿಗೆ ತರಕಾರಿ, ಹಣ್ಣಿಗೆ ಆದ್ಯತೆ ನೀಡಿ. ಸಾಕಷ್ಟು ನೀರು ಕುಡಿಯಿರಿ. ಹಣ್ಣಿನ ಜ್ಯೂಸ್ ಮಾಡಿ ಕುಡಿಯುವ ಬದಲು ನೇರವಾಗಿ ಹಣ್ಣನ್ನು ಸೇವಿಸಿ. ಇದರಿಂದ ದೇಹಕ್ಕೆ ಕಡಿಮೆ ಸಕ್ಕರೆ ಪ್ರಮಾಣ ಸೇರುತ್ತದೆ ಮತ್ತು ಬಹುಬೇಗ ತೂಕ ಇಳಿಸಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...