ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರ ಬಳಿಕ ನಾನು ಸಿಎಂ ಆಗಬೇಕಿತ್ತು ಎಂದು ಸ್ವಾಮೀಜಿಗಳು ಹೇಳುತ್ತಿದ್ದಾರೆ. ಸಿಎಂ ಆಗಲಿಲ್ಲ ಹಾಗಾಗಿ ಡಿಸಿಎಂ ಆದರೂ ಆಗಲಿ ಎಂಬುದು ಸ್ವಾಮೀಜಿಗಳ ಅಭಿಪ್ರಾಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕೆ.ಎಸ್.ಈಶ್ವರಪ್ಪ ಉಪಮುಖ್ಯಮಂತ್ರಿ ಹುದ್ದೆ ಆಸೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನಮ್ಮ ಪಕ್ಷ ಯಾವುದೋ ಒಬ್ಬ ವ್ಯಕ್ತಿ ಮೇಲೆ ನಿಂತಿಲ್ಲ. ಸಿದ್ಧಾಂತ, ಆದರ್ಶದ ಮೇಲೆ ನಿಂತಿದೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.
BIG NEWS: ನಾಳೆಯಿಂದಲೇ ಶಾಲೆ ಆರಂಭದ ನಿರ್ಧಾರ ಕೈಬಿಟ್ಟ ರುಪ್ಸಾ
ಇದೇ ವೇಳೆ ವಲಸೆ ಬಂದವರಿಗೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ವಲಸೆ ಬಂದವರು ಎಂಬ ಪ್ರಶ್ನೆ ಇಲ್ಲ. ನಮ್ಮಲ್ಲಿ ಯವುದೇ ಅಸಮಾಧಾನವೂ ಇಲ್ಲ. ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು. ಎರಡೂ ಸೇರಿದರೆ ಹಾಲುಜೇನು ಎಂದು ಹೇಳಿದ್ದಾರೆ.
ಇನ್ನು ಬಾದಾಮಿಯಿಂದ ಈಶ್ವರಪ್ಪ ಪುತ್ರ ಸ್ಪರ್ಧೆ ಎಂಬ ಚರ್ಚೆ ವಿಚಾರವಾಗಿ, ನಾನು ಸಿದ್ದರಾಮಯ್ಯ ಕುಟುಂಬದವನಲ್ಲ. ನಾನಾಗಲಿ, ನನ್ನ ಮಗ ಆಗಲಿ ಬಾದಾಮಿಯಿಂದ ಸ್ಪರ್ಧಿಸುವುದೂ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಮಗ ಎಂದು ಹೇಳಿ ಸಿದ್ದರಾಮಯ್ಯ ಅದೇ ಕ್ಷೇತ್ರದಲ್ಲಿ ಸೋತರು. ಬಾದಾಮಿಗೆ ಬಂದ್ರು, ಬಾದಾಮಿ ಮಗ ಎಂದರು ಈಗ ಇನ್ಯಾವ ಕ್ಷೇತ್ರದತ್ತ ಮುಖ ಮಾಡುತ್ತಾರೆ ನೋಡಬೇಕು ಎಂದು ಕಿಡಿಕಾರಿದರು.