ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಅದರಲ್ಲೂ ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿ ಅಂತಾ ಎಲ್ಲರೂ ಮನಸ್ಸಿಟ್ಟು ಕೆಲಸ ಮಾಡ್ತಾರೆ. ಸಂಸ್ಥೆಗಾಗಿ ಶ್ರಮಿಸ್ತಾರೆ.
ಆದ್ರೆ ಕೆಲವೊಮ್ಮೆ ಕೆಲಸದಲ್ಲಿ ಪ್ರಗತಿಯನ್ನೇ ನಾವು ಕಾಣುವುದಿಲ್ಲ, ಅದೇ ಹುದ್ದೆ, ಅದೇ ಕೆಲಸ, ವರ್ಷಾನುಗಟ್ಟಲೆ ಒಂದೇ ಕಡೆ ಅಂಟಿಕೊಂಡಿರ್ತೇವೆ. ಬಯಸಿದ್ರೂ ನಮಗೆ ಪ್ರಮೋಷನ್ ಭಾಗ್ಯ ಲಭಿಸುವುದಿಲ್ಲ. ಉದ್ಯೋಗದಲ್ಲಿ ಉನ್ನತಿಗಾಗಿ ಹಿಂದು ಪುರಾಣದಲ್ಲಿ ಕೆಲವೊಂದು ಸಲಹೆಗಳಿವೆ.
ಹಳದಿ ಬಣ್ಣದ ದಾರದ ಉಂಡೆಯನ್ನು ತೆಗೆದುಕೊಳ್ಳಿ. ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿ ಅಂತಾ ಪ್ರಾರ್ಥಿಸಿಕೊಂಡು ಆ ದಾರವನ್ನು ಅಶ್ವತ್ಧ ಮರಕ್ಕೆ ಸುತ್ತಿ. ಆದ್ರೆ ಈ ಕಾರ್ಯವನ್ನು ಸಂಜೆ ವೇಳೆಗೆ ಮಾಡಬಾರದು. ದಾರದ ಚಿಕ್ಕ ತುಂಡನ್ನು ಮನೆಗೆ ತೆಗೆದುಕೊಂಡು ಬನ್ನಿ. ಅದನ್ನು ನಿಮ್ಮ ಕೈಗೆ ಕಟ್ಟಿಕೊಳ್ಳಿ. ನಿಮಗೆ ಪ್ರಮೋಷನ್ ದೊರೆಯುವವರೆಗೂ ಆ ದಾರವನ್ನು ಕೈಯಿಂದ ಬಿಚ್ಚುವಂತಿಲ್ಲ. ಪ್ರಮೋಷನ್ ಸಿಕ್ಕಿದ ಬಳಿಕ ಅದನ್ನು ತೆಗೆದು ಹಾಕಿ.
ಹಿಂದುಗಳು ಅಶ್ವತ್ಥ ಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ಇದೆ. ಅಶ್ವತ್ಧ ಮರಕ್ಕೆ ಹಳದಿ ದಾರವನ್ನು ಕಟ್ಟುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಇದೆ.