ಕಚೇರಿಯಲ್ಲಿ ಸಂಬಳವನ್ನೂ ಕೊಟ್ಟು ನಮ್ಮನ್ನು ಅವರದ್ದೇ ಖರ್ಚಿನಲ್ಲಿ ಮಜಾ ಮಾಡಲು ಕಳಿಸಿದರೆ ಎಷ್ಟು ಮಜವಾಗಿರುತ್ತೆ ಅಲ್ವಾ..? ಇಂತಹದ್ದೊಂದು ಕನಸು ಬಹುಶಃ ಪ್ರತಿಯೊಬ್ಬ ಉದ್ಯೋಗಿಯು ಒಂದಲ್ಲ ಒಂದು ದಿನ ಕಂಡೇ ಇರುತ್ತಾರೆ. ಆದರೆ ಇಂತಹದ್ದೊಂದು ಕನಸನ್ನು ಸಿಡ್ನಿ ಮೂಲದ ಮಾರ್ಕೆಟಿಂಗ್ ಸಂಸ್ಥೆಯು ನನಸು ಮಾಡಿದೆ. ತನ್ನ ಸಂಪೂರ್ಣ ಸಿಬ್ಬಂದಿಯನ್ನು 2 ವಾರಗಳ ಕಾಲ ಕೆಲಸದ ರಜೆಗೆಂದು ಬಾಲಿಗೆ ಕರೆದೊಯ್ದಿದೆ.
ಸಿಬ್ಬಂದಿಯ ಸಂಪೂರ್ಣ ಖರ್ಚನ್ನು ಕಂಪನಿಯೇ ನೋಡಿಕೊಳ್ಳುತ್ತಿರೋದ್ರಿಂದ ಬಾಲಿಯಲ್ಲಿ ಎಂಜಾಯ್ ಮಾಡ್ತಿರುವ ಸಿಬ್ಬಂದಿ ಖರ್ಚು ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳಬೇಕೆಂದೇನಿಲ್ಲ. ಸುಂದರವಾದ ತಾಣಗಳನ್ನು ಕಣ್ತುಂಬಿಕೊಳ್ಳುವಾಗ ಉದ್ಯೋಗಿಗಳು ಹಣದ ಮುಖ ನೋಡಬೇಕೆಂದೂ ಇಲ್ಲ. ತನ್ನ ಕಚೇರಿ ಸಿಬ್ಬಂದಿಗೆ ಸಾಮಾನ್ಯ ಕಚೇರಿ ವಾತಾವರಣದಿಂದ ವಿರಾಮ ನೀಡುವ ಸಲುವಾಗಿ ಬಾಲಿಯಿಂದಲೇ ಕೆಲಸ ಮಾಡಿ ಎಂದು ಕಂಪನಿಯು ಉದ್ಯೋಗಿಗಳನ್ನು ಬಾಲಿಗೆ ಕಳಿಸಿದೆ. ಇಲ್ಲಿ ಸಿಬ್ಬಂದಿ ಎಂಜಾಯ್ ಮಾಡುತ್ತಾ ಕೆಲಸ ಮಾಡ್ತಿದ್ದಾರೆ.
ಸಂಸ್ಥೆಯು ತನ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪ್ರವಾಸದ ಕೆಲವು ಕ್ಷಣಗಳನ್ನು ಹಂಚಿಕೊಂಡಿದೆ, ಅಲ್ಲಿ ಉದ್ಯೋಗಿಗಳು ಬಾಲಿಯಲ್ಲಿ ಎಂಜಾಯ್ ಮಾಡ್ತಿರುವುದನ್ನು ಕಾಣಬಹುದಾಗಿದೆ.