ಒಟ್ಟು 1,149 ಹುದ್ದೆಗಳನ್ನು ಪ್ರಕಟಿಸಲಾಗಿದೆ. General – 489, EWS – 113, SC – 161, ST – 137 ಮತ್ತು OBC – 249. ಮೇಲೆ ತಿಳಿಸಿರುವ ಖಾಲಿ ಹುದ್ದೆಗಳು ತಾತ್ಕಾಲಿಕವಾಗಿರುತ್ತವೆ ಮತ್ತು ಆಡಳಿತಾತ್ಮಕ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ, ಈ ಸಂಖ್ಯೆ ಹೆಚ್ಚು ಅಥವಾ ಕಡಿಮೆಯಾಗಬಹುದು ಎಂಬುದನ್ನು ಗಮನಿಸಬೇಕು. ವೇಕೆನ್ಸಿ ಸಂಖ್ಯೆಯಲ್ಲಿನ ಯಾವುದೇ ಬದಲಾವಣೆಯನ್ನು CISF ವೆಬ್‌ಸೈಟ್‌ನಲ್ಲಿ (www.cisfrectt.in) ತಿಳಿಸಲಾಗುತ್ತದೆ.
CISF ನೇಮಕಾತಿ 2022: ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ, ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾಲಯದಿಂದ 12 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
CISF ನೇಮಕಾತಿ 2022: ವಯಸ್ಸಿನ ಮಿತಿ
ಅಭ್ಯರ್ಥಿಗಳು ಮಾರ್ಚ್ 4, 2022 ರಂತೆ 18-23 ವರ್ಷಗಳ ನಡುವೆ ಇರಬೇಕು. 05/03/1999 ಕ್ಕಿಂತ ಮೊದಲು ಮತ್ತು 04/03/2004 ಕ್ಕಿಂತ ನಂತರ ಜನಿಸಿರಬಾರದು.
CISF ನೇಮಕಾತಿ 2022: ವೇತನ ಶ್ರೇಣಿ
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ, 21,700 ದಿಂದ 69,100 ರೂ.ಗಳ ವರೆಗೆ ಸಂಬಳ ನೀಡಲಾಗುತ್ತದೆ.
CISF ನೇಮಕಾತಿ 2022: ಅರ್ಜಿ ಸಲ್ಲಿಸುವುದು ಹೇಗೆ ?
CISF ನ ಅಧಿಕೃತ ವೆಬ್‌ಸೈಟ್‌ನಲ್ಲಿ (www.cisfrectt.in) ಆನ್‌ಲೈನ್ ಮೋಡ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.
CISF ನೇಮಕಾತಿ 2022: ಅರ್ಜಿ ಶುಲ್ಕ
ಅರ್ಜಿ ಸಲ್ಲಿಸಲು 100 ರೂ. ಶುಲ್ಕ ಪಾವತಿಸಬೇಕು. SC, ST ಮತ್ತು ESM ಗೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
CISF ನೇಮಕಾತಿ 2022: ಕೊನೆಯ ದಿನಾಂಕ
ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ 04/03/2022, ಸಮಯ ಸಂಜೆ 5:00.