ಜಾಗತಿಕವಾಗಿ 2022ರ ಆರ್ಥಿಕ ವರ್ಷದಲ್ಲಿ 35 ಸಾವಿರ ಪದವಿಧರರನ್ನ ನೇಮಕಮಾಡಿಕೊಳ್ಳುವ ಗುರಿಯನ್ನ ನಾವು ಹೊಂದಿದ್ದೇವೆ ಎಂದು ಇನ್ಫೋಸಿಸ್ ಮುಖ್ಯ ಕಾರ್ಯಾಚರಣಾ ಅಧಿಕಾರಿ ಪ್ರವೀಣ್ ರಾವ್ ಹೇಳಿದ್ದಾರೆ. ಮಾರ್ಚ್ ಕೊನೆಯಲ್ಲಿ 2.59 ಲಕ್ಷ ಸಿಬ್ಬಂದಿಯನ್ನ ಹೊಂದಿದ್ದ ಇನ್ಫೋಸಿಸ್ ಜೂನ್ ತ್ರೈಮಾಸಿಕದ ಕೊನೆಯಲ್ಲಿ ಸಿಬ್ಬಂದಿಯ ಸಂಖ್ಯೆ 2.67 ಲಕ್ಷಕ್ಕೆ ಏರಿಕೆಯಾಗಿದೆ.
ಡಿಜಿಟಲ್ ಪ್ರತಿಭೆಗಳ ಬೇಡಿಕೆ ಹೆಚ್ಚಾಗುತ್ತಿರೋದ್ರ ಹಿನ್ನೆಲೆ 2022ರ ಆರ್ಥಿಕ ವರ್ಷದಲ್ಲಿ 35 ಸಾವಿರ ಸಿಬ್ಬಂದಿಯನ್ನ ನೇಮಕ ಮಾಡುವ ಗುರಿ ಹೊಂದಿದ್ದೇವೆ ಎಂದು ಪ್ರವೀಣ್ ರಾವ್ ಹೇಳಿದ್ದಾರೆ.
ನೌಕರರ ಯೋಗ ಕ್ಷೇಮವು ನಮಗೆ ಅತ್ಯಂತ ಮಹತ್ವದ್ದಾಗಿದೆ ಹೀಗಾಗಿ ನೌಕರರಿಗೆ ಲಸಿಕೆ ಹಾಕುವುದು ಸೇರಿದಂತೆ ಸಾಕಷ್ಟು ಮಹತ್ವದ ಕ್ರಮಗಳನ್ನ ಕೈಗೊಂಡಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲೂ ನಾವು ಕೈಗೊಂಡ ಕ್ರಮಗಳ ಬಗ್ಗೆ ನಮ್ಮ ಕ್ಲೈಂಟ್ಗಳು ಸಹ ಸಂತುಷ್ಟರಾಗಿದ್ದಾರೆ. ಈ ಅಸಾಮಾನ್ಯ ಸಂದರ್ಭದಲ್ಲೂ ನಾವು ಪೂರೈಸಿದ ವಿತರಣಾ ಬದ್ಧತೆಯನ್ನ ನಮ್ಮ ಗ್ರಾಹಕರು ಗೌರವಿಸ್ತಾರೆ ಎಂದು ಪ್ರವೀಣ್ ರಾವ್ ಹೇಳಿದ್ರು.
ಬೆಂಗಳೂರು ಮೂಲದ ಇನ್ಫೋಸಿಸ್ ಕಂಪನಿಯು ಇಂದು 22.7 ಪ್ರತಿಶತದ ತ್ರೈಮಾಸಿಕ ಲಾಭ ಗಳಿಸಿದೆ. ಈ ಮೂಲಕ ಜೂನ್ 30ರ ಒಳಗೆ 5195 ಕೋಟಿ ರೂಪಾಯಿಗೆ ನಿವ್ವಳ ಲಾಭ ಏರಿಕೆಯಾಗಿದೆ.