ದಟ್ಟವಾದ ಉದ್ದ ಕೂದಲು ಇರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಕೂದಲು ಉದ್ದ ಬೆಳೆಯಲಿ ಅಂತ ಯುವತಿಯರಂತೂ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಆದ್ರೆ ತಲೆಹೊಟ್ಟು, ಕೂದಲು ವಿಪರೀತ ಉದುರುವ ಸಮಸ್ಯೆ ಹೀಗೆ ಅನೇಕ ತೊಂದರೆಗಳಿಂದಾಗಿ ಉದ್ದವಾಗಿ ಬೆಳೆಯುವುದೇ ಇಲ್ಲ. ಇದಕ್ಕೆ ಕೆಲವೊಂದು ಸುಲಭ ಟಿಪ್ಸ್ ಅನ್ನು ನಾವ್ ನಿಮಗೆ ಕೊಡ್ತೀವಿ. ಕೂದಲು ಉದ್ದ ಬೆಳೆಯೋದಯ ಮಾತ್ರವಲ್ಲ, ಹೊಳಪು ಕೂಡ ಪಡೆಯುತ್ತದೆ.
ಮಸಾಲೆಯುಕ್ತ ಆಹಾರದಿಂದ ದೂರವಿರಿ…
ಮಸಾಲೆಯುಕ್ತ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ನೀವು ದಿನನಿತ್ಯ ಬಳಸುವ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಮತ್ತು ಮಸಾಲೆ ಬಳಸಬೇಡಿ. ಹೆಚ್ಹೆಚ್ಚು ಜಂಕ್ ಫುಡ್‌ಗಳನ್ನು ಕೂಡ ಸೇವನೆ ಮಾಡಬೇಡಿ. ಅವುಗಳಿಂದ ದೂರವಿದ್ದಷ್ಟು ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಹೆಚ್ಹೆಚ್ಚು ನೀರು ಕುಡಿಯಿರಿ…
ಕೆಲವೊಮ್ಮೆ ನೀರಿನ ಕೊರತೆ ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಹಾಗಾಗಿ ನಿಮ್ಮ ದೇಹದಲ್ಲಿ ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳಿ. ಹೆಚ್ಚು ನೀರು ಕುಡಿಯದೇ ಇದ್ದರೆ ಉದ್ದ ಕೂದಲು ಬೆಳೆಸಿಕೊಳ್ಳುವ ನಿಮ್ಮ ಬಯಕೆ ಈಡೇರದೆ ಉಳಿಯಬಹುದು.
ಎಣ್ಣೆಯಿಂದ ಮಸಾಜ್ ಮಾಡಿ…
ಕೂದಲಿಗೆ ಸಾಕಷ್ಟು ಪೋಷಣೆಯ ಅಗತ್ಯವಿರುತ್ತದೆ. ನಿಮ್ಮ ಕೂದಲಿಗೆ ವಾರಕ್ಕೆ ಮೂರು ಬಾರಿ ಎಣ್ಣೆಯಿಂದ ಮಸಾಜ್ ಮಾಡಿ. ಅದು ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಇದರಿಂದ ನಿಮ್ಮ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಕೂದಲು ಸುಲಭವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಜೊತೆಗೆ ಹೊಳಪು ಕೂಡ ಪಡೆದುಕೊಳ್ಳುತ್ತದೆ.