alex Certify ಉದ್ದ ಕೂದಲು ಬೆಳೆಸಲು ಮೊಟ್ಟೆಯನ್ನು ಹೀಗೆ ಬಳಕೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ದ ಕೂದಲು ಬೆಳೆಸಲು ಮೊಟ್ಟೆಯನ್ನು ಹೀಗೆ ಬಳಕೆ ಮಾಡಿ

ಮೊಟ್ಟೆ ಸಂಪೂರ್ಣ ಆಹಾರ, ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಮೊಟ್ಟೆಯಲ್ಲಿವೆ. ಕೂದಲಿನ ಆರೋಗ್ಯಕ್ಕೂ ನೀವು ಮೊಟ್ಟೆಯನ್ನು ಬಳಸಬೇಕು. ದಟ್ಟವಾದ ಸುಂದರ ಕೂದಲನ್ನು ಪಡೆಯಲು ಮೊಟ್ಟೆಯನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಇದು ಕೂದಲಿಗೆ ಹೊಳಪನ್ನು ನೀಡುತ್ತದೆ. ಕೂದಲು ದಪ್ಪವಾಗಿ ಉದ್ದವಾಗಿ ಬೆಳೆಯುತ್ತದೆ. ಮೊಟ್ಟೆಯನ್ನು ನೀವು ಕೂದಲಿಗೆ ಹಚ್ಚಿಕೊಳ್ಳುವಾಗ ಸರಿಯಾದ ಕ್ರಮವನ್ನು ಅನುಸರಿಸಬೇಕು. ಆಗ ಮಾತ್ರ ಅದರ ಪರಿಣಾಮ ಹೆಚ್ಚಾಗಿರುತ್ತದೆ.

ಈ ಪರಿಣಾಮಕಾರಿ ಮನೆಮದ್ದಿಗಾಗಿ ಕ್ಯಾಸ್ಟರ್‌ ಆಯಿಲ್‌ ಅಥವಾ ಹರಳೆಣ್ಣೆ ಕೂಡ ಬೇಕು. ಇವೆರಡೂ ಜೊತೆಯಾಗಿ ಬೆರೆತರೆ ಮಾತ್ರ ಕೂದಲು ಉದ್ದವಾಗಿ ಬೆಳೆಯುತ್ತದೆ. ಒಂದು ಬೌಲ್‌ನಲ್ಲಿ ಮೊಟ್ಟೆಯ ಹಳದಿ ಭಾಗವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದೆರಡು ಚಮಚ ಹರಳೆಣ್ಣೆಯನ್ನು ಬೆರಸಿ. ಎರಡನ್ನೂ ಚೆನ್ನಾಗಿ ಕಲಕಿ ಮಿಕ್ಸ್‌ ಮಾಡಿಕೊಳ್ಳಿ.

ಸಿದ್ಧಪಡಿಸಿದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. ನಂತರ ಅದನ್ನು 20 ನಿಮಿಷಗಳ ಕಾಲ ಅಥವಾ ಅದು ಒಣಗುವವರೆಗೆ ಹಾಗೇ ಬಿಡಿ. ಮಿಶ್ರಣವು ಒಣಗಿದ ನಂತರ ತಂಪಾದ ನೀರು, ಶಾಂಪೂ ಮತ್ತು ಕಂಡಿಷನರ್‌ ಬಳಸಿ ಕೂದಲನ್ನು ಸ್ವಚ್ಛಗೊಳಿಸಿ. ವಾರಕ್ಕೊಮ್ಮೆ ಈ ರೀತಿ ಮಾಡುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...