
ಹಾಗಂತ ಭ್ರಷ್ಟಾಚಾರ ಅನ್ನೋದು ಭಾರತ, ಪಾಕಿಸ್ತಾನದಲ್ಲಿ ಮಾತ್ರ ಇದೆ ಅಂತ ಅಂದ್ಕೊಳ್ಳೊಕೇನೆ ಹೋಗ್ಬೇಡಿ. ಯಾಕಂದ್ರೆ ದೂರದ ಮೆಕ್ಸಿಕೋನಲ್ಲಿಯೂ ಇತ್ತೀಚೆಗೆ ನಡೆದ ಘಟನೆ, ಅಲ್ಲಿಯೂ ಭ್ರಷ್ಟಾಚಾರ ಯಾವ ಮಟ್ಟದಲ್ಲಿದೆ ಅನ್ನೋದಕ್ಕೆ ಕನ್ನಡಿ ಹಿಡಿದ ಹಾಗಿತ್ತು.
ಅದು ತೂಗು ಸೇತುವೆ ಉದ್ಘಾಟನಾ ಕಾರ್ಯಕ್ರಮ. ಆ ಸೇತುವೆ ಉದ್ಘಾಟನೆಗೊಂಡ ನಂತರ ಕೆಲ ನಿಮಿಷಗಳ ನಂತರ ಮೇಯರ್ ಸೇರಿದಂತೆ ಕೆಲ ಅಧಿಕಾರಿಗಳು ಆ ಉಯ್ಯಾಲೆ ಮೇಲೆ ನಡೆಯಲು ಆರಂಭಿಸಿದ್ದಾರೆ. ಅವರು ಇನ್ನೇನು 10-15 ಹೆಜ್ಜೆ ಇಟ್ಟಿರಬೇಕು ಅಷ್ಟೇ, ಆಗಲೇ ಆ ತೂಗು ಉಯ್ಯಾಲೆ ಸೇತುವೆ ಒಮ್ಮೆಲೇ ದಿಢೀರನೇ ಕುಸಿದು ಬಿದ್ದಿತ್ತು. ಪರಿಣಾಮ ಆ ಸೇತುವೆ ಮೇಲಿದ್ದವರೆಲ್ಲ ಅಲ್ಲೇ ಕೆಳಗೆ ಇದ್ದ ಚರಂಡಿಯಲ್ಲಿ ಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಅಲ್ಲಿಯೂ ಭ್ರಷ್ಟಾಚಾರ ಏನೂ ಕಡಿಮೆ ಇಲ್ಲ ಅನ್ನೊ ಹಾಗಿದೆ.
ಮರದ ಹಲಗೆಗಳಿಂದ ನಿರ್ಮಿಸಲಾದ ಈ ನೇತಾಡುವ ಸೇತುವೆಯು 20 ಜನರ ತೂಕವನ್ನು ತಡೆದುಕೊಳ್ಳದಷ್ಟು ದುರ್ಬಲವಾಗಿತ್ತು. ಘಟನೆಯಲ್ಲಿ ಮೇಯರ್ ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಳಗಡೆ ಹರಿಯುತ್ತಿದ್ದ ಚರಂಡಿಯಲ್ಲಿ ಬಂಡೆಗಳು, ದೊಡ್ಡ ಕಲ್ಲುಗಳೂ ಇದ್ದವು. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ. ಈ ಸಂಪೂರ್ಣ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇರ್ ಆದ ಬಳಿಕ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.