ಉತ್ತರ ಭಾರತದಲ್ಲಿ ಮೊದಲ ಸ್ಕಿನ್ ಬ್ಯಾಂಕ್ ಸ್ಥಾಪಿಸಲಾಗಿದೆ. ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸ್ಕಿನ್ ಬ್ಯಾಂಕ್ಗೆ ಚಾಲನೆ ಸಿಕ್ಕಿದೆ. ಜನರು ದಾನ ಮಾಡಿದ ಚರ್ಮವನ್ನು ಸ್ಕಿನ್ ಬ್ಯಾಂಕ್ನಲ್ಲಿ ಇಡಲಾಗುತ್ತದೆ. ಇದನ್ನು ಸುಟ್ಟ ಗಾಯಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಚರ್ಮದಾನ ಕಾರ್ಯವನ್ನು ಪ್ರಾರಂಭಿಸಿರುವ ಉತ್ತರ ಭಾರತದ ಮೊದಲ ಆಸ್ಪತ್ರೆ ಇದು. ತೀವ್ರವಾದ ಸುಟ್ಟ ಗಾಯ ಅಥವಾ ಆಸಿಡ್ ಬರ್ನ್ಗೆ ಒಳಗಾದ ರೋಗಿಗಳಿಗೆ ಚರ್ಮದ ಕಸಿ ಮಾಡಲು ಬ್ಯಾಂಕ್ ಸಹಾಯ ಮಾಡುತ್ತದೆ.
ವ್ಯಕ್ತಿಯ ಮರಣದ 6 ಗಂಟೆಗಳ ಒಳಗೆ ಚರ್ಮವನ್ನು ದಾನ ಮಾಡಬಹುದು. ದೇಶದಲ್ಲಿ ಒಟ್ಟು 16 ಸ್ಕಿನ್ ಬ್ಯಾಂಕ್ಗಳಿವೆ. ಮಹಾರಾಷ್ಟ್ರದಲ್ಲಿ 7, ಚೆನ್ನೈನಲ್ಲಿ 4, ಕರ್ನಾಟಕದಲ್ಲಿ 3 ಮತ್ತು ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಂದು ಸ್ಕಿನ್ ಬ್ಯಾಂಕ್ಗಳಿವೆ. ಚರ್ಮದ ಕಸಿ ಮಾಡಲು ಅದೇ ರಕ್ತದ ಗುಂಪಿನವರದ್ದೇ ಆಗಬೇಕೆಂದಿಲ್ಲ. ನಂತರ ಇಮ್ಯುನೊಸಪ್ರೆಶನ್ ಔಷಧಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಯಾವುದೇ ವ್ಯಕ್ತಿ ಚರ್ಮವನ್ನು ದಾನ ಮಾಡಬಹುದು ಮತ್ತು ಯಾರ ಚರ್ಮವನ್ನು ಬೇಕಾದರೂ ಯಾವುದೇ ವ್ಯಕ್ತಿಗೆ ಅನ್ವಯಿಸಬಹುದು.
ಚರ್ಮದ ಸುಡುವಿಕೆ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ. ಅಪಘಾತ ಅಥವಾ ಆಸಿಡ್ ದಾಳಿಯಲ್ಲಿ ಸುಟ್ಟ ಗಾಯಗಳಿಂದಾಗಿ ಪ್ರತಿ ವರ್ಷ ಅನೇಕ ಜನರು ಸಾವನ್ನಪ್ಪುತ್ತಾರೆ. ಚರ್ಮದಾನದ ಸಹಾಯದಿಂದ ಅವರನ್ನು ಬದುಕಿಸಬಹುದು, ಹೊಸ ರೂಪ ನೀಡಬಹುದು. ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ 80 ಲಕ್ಷಕ್ಕೂ ಹೆಚ್ಚು ಜನರು ಈ ರೀತಿ ಸುಟ್ಟ ಗಾಯಗಳಿಗೆ ತುತ್ತಾಗುತ್ತಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಮತ್ತೊಂದೆಡೆ, 10-15 ಪ್ರತಿಶತದಷ್ಟು ಜನರು ಚರ್ಮದ ಸುಡುವಿಕೆಯಿಂದ ಗಂಭೀರವಾದ ಚರ್ಮ ಸಂಬಂಧಿತ ಕಾಯಿಲೆಗಳಿಗೆ ಒಳಗಾಗುತ್ತಾರೆ. ಇದು ಮಾರಣಾಂತಿಕವೂ ಆಗಬಹುದು.
ಚರ್ಮವು ಯಾವುದೇ ವ್ಯಕ್ತಿಯ ದೇಹದ ನೈಸರ್ಗಿಕ ಹೊದಿಕೆಯಾಗಿದೆ. ಇದು ದೇಹದ ಸುರಕ್ಷಿತ ಕಾವಲುಗಾರನಂತೆ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಬಿಸಿಲು, ಮಾಲಿನ್ಯ, ರಾಸಾಯನಿಕಗಳು ಮತ್ತು ಬ್ಯಾಕ್ಟೀರಿಯಾಗಳಿಂದ ದೇಹವನ್ನು ರಕ್ಷಿಸುತ್ತದೆ. ಸ್ವಾಭಾವಿಕವಾಗಿ, ಸ್ವಲ್ಪ ಗಾಯ ಅಥವಾ ಗೀರು ಇತ್ಯಾದಿಗಳಾದಾಗ ಚರ್ಮವು ತಂತಾನೇ ಚೇತರಿಸಿಕೊಳ್ಳುತ್ತದೆ. ಈ ಗುರುತುಗಳು ಮತ್ತು ಕಲೆಗಳು ಕ್ರಮೇಣ ಮಾಯವಾಗುತ್ತವೆ.
ಚರ್ಮದಾನಕ್ಕಾಗಿ ರಕ್ತ ಪರೀಕ್ಷೆ ಮತ್ತು ಚರ್ಮದ ಬಣ್ಣ ಪರೀಕ್ಷೆಯನ್ನು ಮೊದಲು ಮಾಡಲಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಸತ್ತಾಗ 6 ಗಂಟೆಗಳ ಒಳಗೆ ಅಗತ್ಯವಿರುವವರಿಗೆ ಚರ್ಮವನ್ನು ದಾನ ಮಾಡಲಾಗುತ್ತದೆ. ಚರ್ಮವನ್ನು 3-5 ವರ್ಷಗಳವರೆಗೆ ಘನೀಕರಿಸುವ ಪ್ರಕ್ರಿಯೆಯ ಮೂಲಕ ಸಂಗ್ರಹಿಸಲಾಗುತ್ತದೆ.