ಪ್ರತಿಯೊಬ್ಬ ವಿದ್ಯಾರ್ಥಿಗೂ ಪರೀಕ್ಷಾ ಫಲಿತಾಂಶ ಬಹು ಮುಖ್ಯವಾಗಿರುತ್ತದೆ. ಮುಂದಿನ ತರಗತಿಗಳಿಗೆ ಸೇರಿಕೊಳ್ಳಲು ಅಂಕಗಳಿಗೆ ಪ್ರಾಮುಖ್ಯತೆ ಸಿಗುವ ಕಾರಣ ವರ್ಷಪೂರ್ತಿ ಕಷ್ಟಪಟ್ಟು ಹೋಗಿ ಪರೀಕ್ಷೆ ಬರೆದಿರುತ್ತಾರೆ.
ಆದರೆ ಕೆಲವೊಬ್ಬರು ಮೌಲ್ಯಮಾಪಕರು ಮಾಡುವ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಪರಿತಪಿಸುವಂತಾಗುತ್ತದೆ. ಅಂಥದೇ ಪ್ರಕರಣವೊಂದರ ವರದಿ ಇಲ್ಲಿದೆ.
ಚಳ್ಳಕೆರೆಯ ಜೋಗೇಶ್ವರಿ ಪದವಿ ಪೂರ್ವ ಕಾಲೇಜಿನ ಆರ್. ನಿವೇದಿತಾ ಎಂಬವರು ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ 15 ಪುಟಗಳಷ್ಟು ಉತ್ತರ ಬರೆದಿದ್ದರು. ಆದರೆ ಮೌಲ್ಯಮಾಪಕರು ಕೇವಲ ಎರಡು ಪುಟಗಳನ್ನಷ್ಟೇ ಮೌಲ್ಯಮಾಪನ ಮಾಡಿ 15 ಅಂಕ ನೀಡಿದ್ದಾರೆ.
ತಮ್ಮ ಉತ್ತರ ಪತ್ರಿಕೆಯನ್ನು ನಿವೇದಿತಾ ಅವರು ಪಡೆದುಕೊಂಡ ವೇಳೆ ಉಳಿದ 13 ಪುಟಗಳಲ್ಲಿದ್ದ ಉತ್ತರವನ್ನು ಮೌಲ್ಯಮಾಪಕರು ಗಮನಿಸಿಯೆ ಇಲ್ಲದ ಸಂಗತಿ ಬೆಳಕಿಗೆ ಬಂದಿದೆ. ಇದೀಗ ನಿವೇದಿತಾ ಜುಲೈ 18ರಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ.