ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನ ಮುಕ್ತಾಯವಾಗ್ತಿದ್ದಂತೆ ಟ್ವಿಟ್ಟರ್ ನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ‘ಮೈ ಭಿ ಭಗವಧಾರಿ’ (ನಾನು ಕೂಡ ಕೇಸರಿ ಧರಿಸಿದ್ದೇನೆ) ಎಂಬ ಹ್ಯಾಶ್‌ಟ್ಯಾಗ್ ಭಾರತದಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ.
ಟಾಪ್ ಟ್ರೆಂಡಿಂಗ್ ನಲ್ಲಿರೋ ಇದು ಈಗಾಗ್ಲೇ 415 ಮಿಲಿಯನ್ ಗೂ ಅಧಿಕ ಪ್ರತಿಕ್ರಿಯೆಗಳನ್ನು ಗಿಟ್ಟಿಸಿಕೊಂಡಿದೆ. 58 ಮಿಲಿಯನ್ ಜನರನ್ನು ತಲುಪಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಾನು ‘ಭಗವಧಾರಿ’ ಎಂದು ಹೇಳಿದ ಬೆನ್ನಲ್ಲೇ ಈ ಹ್ಯಾಶ್‌ಟ್ಯಾಗ್ ಪ್ರಾರಂಭವಾಯಿತು.
ಗೋರಖ್‌ಪುರದ ಸಾರ್ವಜನಿಕ ಸಭೆಯಲ್ಲಿ ಎಸ್‌ಪಿ ನಾಯಕಿ ಡಿಂಪಲ್ ಯಾದವ್ ಮಾಡಿದ ಟೀಕೆಗಳಿಗೆ ಯೋಗಿ ಉತ್ತರಿಸುತ್ತಿದ್ರು. ಬಿಜೆಪಿಯನ್ನು ಬೆಂಬಲಿಸುವವರೆಲ್ಲ ಟ್ವಿಟ್ಟರ್ ನಲ್ಲಿ ತಮ್ಮನ್ನು ತಾವು ಭಗವಧಾರಿಗಳೆಂದು ಕರೆದಿಕೊಂಡಿದ್ದಾರೆ. ಕೇಸರಿ ತುಕ್ಕು ಹಿಡಿದ ಬಣ್ಣವೆಂದು ಡಿಂಪಲ್ ಯಾದವ್ ಟೀಕಿಸಿದ್ದರು.
ಇದು ಸನಾತನ ಸಂಸ್ಕೃತಿ ಮತ್ತು ಸಂತರಿಗೆ ಮಾಡಿದ ಅವಮಾನ ಎಂದು ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ. ಫಿರ್ ಏಕ್ ಬಾರ್ ಯೋಗಿ ಸರ್ಕಾರ್ ಎಂಬ ಘೋಷಣೆಗಳು ಕೂಡ ಕೇಳಿ ಬಂದಿವೆ.