ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಬ್ಲಾಕ್‌ಬಸ್ಟರ್ ʼಪುಷ್ಪಾ – ದಿ ರೈಸ್ʼ ಸಿನಿಮಾ, ಈಗ ಭಾರತದಲ್ಲಿ ಮನೆಮಾತಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚಲನಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಜನರು ಇನ್ನೂ ಅದರ ಹಾಡುಗಳಿಗೆ ಡಾನ್ಸ್ ರೀಲ್‌ಗಳನ್ನು ರಚಿಸುತ್ತಿದ್ದಾರೆ. ಹಾಗೂ ಅಲ್ಲು ಅರ್ಜುನ್ ಅವರ ಸಂಭಾಷಣೆಗಳಿಗೆ ಲಿಪ್ ಸಿಂಕ್ ಮಾಡುತ್ತಾರೆ.
ಇದೀಗ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ಪುಷ್ಪಾ ಎಂಬ ಡೈಲಾಗ್ ಬರೆದಿದ್ದಾನೆ. ಈ ಮೂಲಕ ಶಾಲೆಗಳಲ್ಲೂ ಸಿನಿಮಾದ ಪ್ರಭಾವ ಕಂಡು ಬರುತ್ತಿದೆ.
BIG NEWS: ಯೋ ಯೋ ಹನಿ ಸಿಂಗ್ ಮೇಲೆ ಅಪರಿಚಿತರಿಂದ ಹಲ್ಲೆ; ಪೊಲೀಸ್ ದೂರು
10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಧ್ಯಮಿಕ ಪರೀಕ್ಷೆ 2022 ಮಾರ್ಚ್ 7 ರಂದು ಪ್ರಾರಂಭವಾಗಿ 16 ಮಾರ್ಚ್ 2022 ರಂದು ಮುಕ್ತಾಯವಾಯಿತು. ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಮಾಡುತ್ತಿರುವಾಗ, ಮೌಲ್ಯಮಾಪಕರು ಉತ್ತರ ಪತ್ರಿಕೆಯಲ್ಲಿ ಬರೆಯಲಾದ ವಿಚಿತ್ರ ಸಂದೇಶವನ್ನು ಕಂಡು ಅವಕ್ಕಾಗಿದ್ದಾರೆ. ಪುಷ್ಪಾ ರಾಜ್……. ನಾನು ಅದನ್ನು ಬರೆಯುವುದಿಲ್ಲ ಎಂದು ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿತ್ತು. ಮೂಲ ಸಂಭಾಷಣೆ ಬೇರೆಯೇ ಆಗಿದ್ದರೂ ವಿದ್ಯಾರ್ಥಿ ಸಂಭಾಷಣೆಗೆ ತನ್ನದೇ ಆದ ಟ್ವಿಸ್ಟ್ ಕೊಟ್ಟಿದ್ದಾನೆ.
ಸದ್ಯ, ಈ ಪರೀಕ್ಷಾ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೋಕ್‌ಗಳು ಮತ್ತು ಮೀಮ್‌ಗಳ ಹಾವಳಿ ಎಬ್ಬಿಸಲು ಕಾರಣವಾಗಿದೆ.