ಚಮೋಲಿ: ಉತ್ತರಾಖಂಡ್ ನ ಚಮೋಲಿಯಲ್ಲಿ ಮತ್ತೆ ಹಿಮ ಪ್ರವಾಹದ ಭೀತಿ ಹೆಚ್ಚುತ್ತಿದೆ. ಭಾರೀ ಪ್ರವಾಹದ ಬಳಿಕ ಕೊಂಚ ತಣ್ಣಗಾಗಿದ್ದ ದೌಲಿಗಂಗಾ, ಅಲಕನಂದಾ, ಋಶಿಗಂಗಾ ನದಿಗಳ ನೀರಿನ ಪ್ರಮಾಣ ಇದೀಗ ಮತ್ತೆ ಹೆಚ್ಚಳವಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಚಮೋಲಿಯಲ್ಲಿ ಭಾರೀ ಹಿಮಪಾತದಿಂದ ಉಂಟಾದ ಭೀಕರ ಪ್ರವಾಹಕ್ಕೆ ಮನೆ ಮಠಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಹಲವರು ಸಾವನ್ನಪ್ಪಿದ್ದರು. 170ಕ್ಕೂ ಹೆಚ್ಚು ಜನ ಕಣ್ಮರೆಯಾಗಿದ್ದಾರೆ. ಕಳೆದ 5 ದಿನಗಳಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇದೀಗ ರಿಶಿಗಂಗಾ ನದಿಯಲ್ಲಿ ದಿಢೀರನೇ ನೀರಿನ ಪ್ರಮಾಣ ಹೆಚ್ಚಿದ್ದು, ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾದರೆ ಕಠಿಣ ಕ್ರಮ: ಕೇಂದ್ರ ಸರ್ಕಾರದಿಂದ ಖಡಕ್ ವಾರ್ನಿಂಗ್…!
ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.