ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಹೊಸ ದಾಖಲೆ ಎಂಬಂತೆ ಬರೋಬ್ಬರಿ 8 ಮಹಿಳೆಯರು ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ರೇಖಾ ಆರ್ಯ ಹಾಗೂ ಮಮತಾ ರಾಕೇಶ್ ಎಂಬವರು ಮೂರು ಚುನಾವಣೆಗಳಲ್ಲಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶೈಲಾ ರಾಣಿ ರಾವತ್, ಸರಿತಾ ಆರ್ಯ ಹಾಗೂ ರಿತು ಎರಡನೇ ಬಾರಿಗೆ ವಿಧಾನಸೌಧ ಮೆಟ್ಟಿಲೇರುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿಯು ಈ ಬಾರಿ ಆರು ಮಹಿಳಾ ಅಭ್ಯರ್ಥಿಗಳಿಗೆ ಚುನಾವಣಾ ಟಿಕೆಟ್ ನೀಡಿದ್ದು ಪ್ರತಿಯೊಬ್ಬರೂ ಗೆಲುವನ್ನು ದಾಖಲಿಸಿದ್ದಾರೆ. ಉತ್ತರಾಖಂಡ್ನ ಡೆಹ್ರಾಡೂನ್ ಕಂಟೋನ್ಮೆಂಟ್ ಕ್ಷೇತ್ರದಿಂದ ಬಿಜೆಪಿಯಿಂದ ಸವಿತಾ ಕಪೂರ್ ಗೆಲುವು ಸಾಧಿಸಿದ್ದಾರೆ. ಉತ್ತರಾಖಂಡ್ ಮಾಜಿ ಸಿಎಂ ಬಿ.ಸಿ. ಖಂಡೂರಿ ಪುತ್ರಿ ಬಿಜೆಪಿಯ ರಿತು ಖಂಡೂರಿ ಭೂಷಣ್ ಕೋಟ್ದ್ವಾರ್ ಕ್ಷೇತ್ರದಲ್ಲಿ 387 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕೇದಾರನಾಥ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೈಲಾ ರಾಣಿ ರಾವತ್ ಸ್ವತಂತ್ರ ಅಭ್ಯರ್ಥಿ ಕುಲದೀಪ್ ಸಿಂಗ್ ರಾವತ್ ರನ್ನು ಸೋಲಿಸಿದರು. ಯಮಕೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರೇಣು ಬಿಷ್ತ್ ಗೆಲುವು ಸಾಧಿಸಿದ್ದಾರೆ. ಸೋಮೇಶ್ವರ ಕ್ಷೇತ್ರದಿಂದ ಬಿಜೆಪಿಯ ರೇಖಾ ಆರ್ಯ ಗೆಲುವು ಸಾಧಿಸಿದ್ದಾರೆ.
ಸರಿತಾ ಆರ್ಯ ನೈನಿತಾಲ್ ಕ್ಷೇತ್ರದಿಂದ ಗೆದ್ದಿದ್ದರೆ, ಕಾಂಗ್ರೆಸ್‌ನ ಮಮತಾ ರಾಕೇಶ್ ಭಗವಾನ್‌ಪುರ ಕ್ಷೇತ್ರದಿಂದ ಗೆದ್ದಿದ್ದಾರೆ. ಹರಿದ್ವಾರ ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಪುತ್ರಿ ಅನುಪಮಾ ಸಚಿವ ಯತೀಶ್ವರಾನಂದ್ ಸೋಲಿಸಿ ಗೆಲುವು ಸಾಧಿಸಿದ್ದಾರೆ.