alex Certify ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಡಿಜಿಟಲ್ ಪ್ರಚಾರ; ಸ್ಮಾರ್ಟ್‌ಫೋನ್‌ಗಳಿರುವ 10 ಲಕ್ಷ ಕಾರ್ಯಕರ್ತರ ನಿಯೋಜನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಡಿಜಿಟಲ್ ಪ್ರಚಾರ; ಸ್ಮಾರ್ಟ್‌ಫೋನ್‌ಗಳಿರುವ 10 ಲಕ್ಷ ಕಾರ್ಯಕರ್ತರ ನಿಯೋಜನೆ..!

ವಿಧಾನಸಭಾ ಚುನಾವಣೆಯ ಡಿಜಿಟಲ್ ಪ್ರಚಾರದ ಭಾಗವಾಗಿ, ಉತ್ತರ ಪ್ರದೇಶದಾದ್ಯಂತ ಸ್ಮಾರ್ಟ್‌ಫೋನ್‌ಗಳಿರುವ ಸುಮಾರು 10 ಲಕ್ಷ ಕಾರ್ಯಕರ್ತರನ್ನು ಬಿಜೆಪಿ ನಿಯೋಜಿಸಿದೆ ಎಂದು ಝೀ ನ್ಯೂಸ್ ವರದಿ ಮಾಡಿದೆ.

ಉತ್ತರ ಪ್ರದೇಶದ ಪ್ರತಿ ಮತಗಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಹೊಂದಿರುವ ಐದರಿಂದ ಆರು ಕಾರ್ಯಕರ್ತರನ್ನ ನಿಯೋಜಿಸಲಾಗಿದೆ. ಕೇಸರಿ ಪಕ್ಷವು ತನ್ನ ಐಟಿ ಮತ್ತು ಸಾಮಾಜಿಕ ಮಾಧ್ಯಮ ತಂಡಗಳನ್ನು ಬ್ಲಾಕ್ ಮಟ್ಟದಲ್ಲಿ ರಚಿಸಿದೆ. ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಈ 10 ಲಕ್ಷ ಕಾರ್ಯಕರ್ತರು ಆಯಾ ಪ್ರದೇಶದ ಪ್ರತಿಯೊಬ್ಬ ಮತದಾರರನ್ನು ತಲುಪುತ್ತಾರೆ ಎಂದು ವರದಿ ತಿಳಿಸಿದೆ.

ಪ್ರತಿ ಮತಗಟ್ಟೆಯಲ್ಲಿ 21 ಸದಸ್ಯರ ಬೂತ್ ಸಮಿತಿ ರಚಿಸಿದ್ದು, ಈ ಪೈಕಿ ಕನಿಷ್ಠ ಐವರು ಸದಸ್ಯರು ಸ್ಮಾರ್ಟ್ ಫೋನ್ ಹೊಂದಿದ್ದಾರೆ. ಬೂತ್ ಮಟ್ಟದ ಎಲ್ಲಾ ಮಾಹಿತಿಯನ್ನ ತಕ್ಷಣ ಹಂಚಿಕೊಳ್ಳುವುದನ್ನ ಕಡ್ಡಾಯಗೊಳಿಸಲಾಗಿದೆ.

ರಾಜ್ಯದಲ್ಲಿ 1,74,351 ಮತಗಟ್ಟೆಗಳಿದ್ದು, 2017ರ ವಿಧಾನಸಭೆ ಚುನಾವಣೆಗಿಂತ ಶೇ.18.49ರಷ್ಟು ಹೆಚ್ಚಳವಾಗಿದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ ಐದು ಸದಸ್ಯರು ಸ್ಮಾರ್ಟ್‌ಫೋನ್‌ಗಳನ್ನ ಹೊಂದಿದ್ದು, ರಾಜ್ಯಾದ್ಯಂತ ಡಿಜಿಟಲ್ ವಿಷಯದೊಂದಿಗೆ ಮತದಾರರನ್ನು ತಲುಪಲು ಸಹಾಯಕವಾಗುತ್ತದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ನಾವು ಪ್ರತಿ ಮತಗಟ್ಟೆಯಲ್ಲಿ ಐದರಿಂದ ಆರು ಸ್ವಯಂಸೇವಕರ ತಂಡವನ್ನು ರಚಿಸಿದ್ದೇವೆ. ನಮ್ಮ ಸ್ವಯಂಸೇವಕರು ಪ್ರತಿ ಮತಗಟ್ಟೆಯಲ್ಲಿನ ಪ್ರತಿ ಮತದಾರರಲ್ಲಿ ನಮ್ಮ ಡಿಜಿಟಲ್ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಭಾರತೀಯ ಚುನಾವಣಾ ಆಯೋಗವು (ಇಸಿಐ) ಜನವರಿ 31 ರವರೆಗೆ ಭೌತಿಕ ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ನಿಷೇಧಿಸಿದೆ, ಮೊದಲ ಮತ್ತು ಎರಡನೇ ಹಂತದ ಮತದಾನಕ್ಕೆ ಸ್ವಲ್ಪ ಸಡಿಲಿಕೆ ನೀಡಿದೆ. ಚುನಾವಣಾ ಸಮಿತಿಯು ವಿಧಿಸಿರುವ ನಿರ್ಬಂಧಗಳ ನಡುವೆ ಮತದಾರರನ್ನು ಡಿಜಿಟಲ್ ಮೂಲಕ ತಲುಪಲು ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲಿ, ಬ್ಲಾಕ್ ಮಟ್ಟದಲ್ಲಿ ಐಟಿ ಮತ್ತು ಸಾಮಾಜಿಕ ಮಾಧ್ಯಮ ಪ್ರಚಾರಕ್ಕಾಗಿ ಬಿಜೆಪಿ ತಂಡಗಳನ್ನು ರಚಿಸಿದೆ ಎಂದು ಮತ್ತೊಬ್ಬ ಹಿರಿಯ ನಾಯಕ ಹೇಳಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿಯು, ಪ್ರತಿ ಜಿಲ್ಲೆಯಲ್ಲಿ ಪ್ರತಿ ಹಂತದಲ್ಲೂ ದೃಢವಾದ ಸಾಮಾಜಿಕ ಮಾಧ್ಯಮ ಮತ್ತು ಐಟಿ ಸ್ವಯಂಸೇವಕರ ತಂಡವನ್ನು ಹೊಂದಿದೆ. ಜೊತೆಗೆ, ನಾವು ಪ್ರತಿ ಮತಗಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಐದು ಕಾರ್ಯಕರ್ತರನ್ನ ನಿಯೋಜಿಸಿದ್ದೇವೆ. ಅವರುಗಳ ಮೂಲಕ ಜನರಿಗೆ ಮಾಹಿತಿ ಮತ್ತು ವಿಷಯ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಪಕ್ಷದ ಸಾಮಾಜಿಕ ಮಾಧ್ಯಮ ಸಹ ಸಂಚಾಲಕ ಶಶಿಕುಮಾರ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...