ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ. ಹಗಲಿನಲ್ಲಿ ಕೆಲಸದೊತ್ತಡ ರಾತ್ರಿಯಲ್ಲಿ ನಿದ್ದೆ ಬರದೆ ಚಡಪಡಿಸುತ್ತಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ.
ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು, ಬೀಜವಿದ್ದರೆ ಪ್ರತ್ಯೇಕಿಸಿ ಮಿಕ್ಸಿಯಲ್ಲಿ ರುಬ್ಬಿ ಅದರ ರಸವನ್ನು ರಾತ್ರಿ ವೇಳೆ ಸೇವಿಸುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ರುಬ್ಬುವಾಗ ಸಕ್ಕರೆ ಬಳಸದಿರಿ.
ನಿಯಮಿತವಾಗಿ ಇದನ್ನು ಸೇವಿಸುವುದರಿಂದ ದೇಹ ತೂಕವನ್ನೂ ಇಳಿಸಬಹುದು. ಆದರೆ ಮಾಡಿದಾಕ್ಷಣ ಅಂದರೆ ಫ್ರೆಶ್ ಆಗಿರುವಂತೆಯೇ ಸೇವಿಸಬೇಕು. ಫ್ರಿಜ್ ನಲ್ಲಿಟ್ಟು ಬಳಿಕ ಸೇವಿಸಬಾರದು.
ದ್ರಾಕ್ಷಿ ಜ್ಯೂಸ್ ನಲ್ಲಿರುವ ಆಂಟಿ ಅಕ್ಸಿಡೆಂಟ್ ಗಳು ದೇಹದ ಬಿಳಿ ಕೊಬ್ಬನ್ನು ಕಂದು ಕೊಬ್ಬಾಗಿ ಪರಿವರ್ತಿಸುತ್ತದೆ. ಹೀಗಾಗಿ ಇದು ಕೊಬ್ಬನ್ನು ಇಳಿಸುತ್ತದೆ.
ದ್ರಾಕ್ಷಿ ರಸವನ್ನು ಮುಖಕ್ಕೆ, ತಲೆಗೆ ಹಚ್ಚಿಕೊಂಡು ಆಕರ್ಷಕ ಮುಖ ಹಾಗೂ ನೀಳ ಕಪ್ಪನೆಯ ಕೂದಲನ್ನು ಹೊಂದಬಹುದು.