ಈ ಬಾರಿ ಉತ್ತಮ ಮಳೆ – ಬೆಳೆಯಾಗಲಿ ಹಾಗೂ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂಬ ಕಾರಣಕ್ಕೆ ಚಾಮರಾಜನಗರ ತಾಲೂಕಿನ ಭೋಗಾಪುರದ ನಾಯಕ ಬೀದಿ ನಿವಾಸಿಗಳು ಮರಗಳಿಗೆ ಮದುವೆ ಮಾಡಿಸಿದ್ದಾರೆ.
ಗ್ರಾಮದ ವಾಲ್ಮೀಕಿ ಸಮುದಾಯ ಭವನದ ಮುಂಭಾಗದಲ್ಲಿರುವ ಅರಳಿ ಮರ ಹಾಗೂ ಬೇವಿನ ಮರಕ್ಕೆ ಶುಕ್ರವಾರದಂದು ಸಂಪ್ರದಾಯ ಬದ್ಧವಾಗಿ ಮದುವೆ ನೆರವೇರಿಸಲಾಗಿದ್ದು, ಅರ್ಚಕ ನಿಜಗುಣ ಆರಾಧ್ಯ ಇದರ ಅಂಗವಾಗಿ ಹೋಮ ಮಾಡಿದ್ದಾರೆ.
ಅರಳಿ ಮರಕ್ಕೆ ಸೀರೆ ಉಡಿಸಲಾಗಿದ್ದರೆ, ಬೇವಿನ ಮರಕ್ಕೆ ಪಂಚೆ ಉಡಿಸಲಾಗಿದ್ದು, ಅಲ್ಲದೆ ಬಾಸಿಂಗವನ್ನು ಕಟ್ಟಲಾಗಿತ್ತು. ಬಳಿಕ ಮಾಂಗಲ್ಯ ಧಾರಣೆ ಮಾಡಿ ಮರಗಳಿಗೆ ಮದುವೆ ಮಾಡಲಾಗಿದ್ದು, ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು.