ರಾಜ್ಯದಲ್ಲಿ ಈ ಬಾರಿ ಮುಂಗಾರು ಬಹುಬೇಗನೆ ಆರಂಭವಾದರೂ ಸಹ ವ್ಯಾಪಕ ಮಳೆಯಾಗಿರಲಿಲ್ಲ. ತಡವಾಗಿಯಾದರೂ ಈಗ ಮುಂಗಾರು ಚುರುಕು ಪಡೆದುಕೊಂಡಿದ್ದು, ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಕೃಷಿ ಚಟುವಟಿಕೆಯೂ ಗರಿಗೆದರಿದೆ.
ಭತ್ತ ಬಿತ್ತನೆ ಬೀಜ ಖರೀದಿ ಹೆಚ್ಚಾಗಿದ್ದು, ಪ್ರಸ್ತುತ ರೈತರು ಸಸಿ ಮಡಿ ಕಾರ್ಯದಲ್ಲಿ ತೊಡಗಿದ್ದಾರೆ. ಜುಲೈ ಅಂತ್ಯದ ವೇಳೆಗೆ ನಾಟಿ ಕೆಲಸ ಆರಂಭವಾಗಲಿದ್ದು, ಇದರ ಜೊತೆಗೆ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನೂ ರೈತರು ಬೆಳೆದಿದ್ದಾರೆ.
ಇದರ ಮಧ್ಯೆ ಮಳೆ ಹೆಚ್ಚಾಗಿ ಬೀಳುತ್ತಿರುವ ಕಾರಣ ಕೆಲವೊಂದು ಪ್ರದೇಶಗಳಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಜೊತೆಗೆ ಗುಡ್ಡ ಕುಸಿತವೂ ಸಂಭವಿಸುತ್ತಿರುವ ಕಾರಣ ಅಡಿಕೆ, ತೆಂಗು ತೋಟಗಳು ನಾಶವಾಗಿದೆ.