ಇತ್ತೀಚಿನ ದಿನಗಳಲ್ಲಿ ಖಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಜನರ ಜೀವನ ಶೈಲಿ ಅವರು ಹಾಸಿಗೆ ಹಿಡಿಯುವಂತೆ ಮಾಡುತ್ತಿದೆ. ರೋಗದಿಂದ ಮುಕ್ತಿ ಪಡೆಯಲು ಜೋತಿಷ್ಯ ಶಾಸ್ತ್ರದಲ್ಲಿ ಉಪಾಯ ಹೇಳಲಾಗಿದೆ.
ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವವರು ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆಯದೆ, ಬಾಯಿ ಮುಕ್ಕಳಿಸದೆ ನಿಮ್ಮ ಎರಡೂ ಅಂಗೈಯನ್ನು ನೋಡಿಕೊಳ್ಳಿ. ಇದ್ರಿಂದ ಆರೋಗ್ಯ ವೃದ್ಧಿಯಾಗುವ ಜೊತೆಗೆ ಅದೃಷ್ಟವೂ ಒಲಿಯುತ್ತದೆ.
ಜಾತಕದ ದೋಷದಿಂದ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರೆ ಸೂರ್ಯ ಮೇಷ ರಾಶಿಗೆ ಪ್ರವೇಶ ಮಾಡ್ತಿದ್ದಂತೆ ಬೇವಿನ ಎಲೆಗೆ ಬೆಲ್ಲ ಸೇರಿಸಿ ಅದನ್ನು ಸೇವಿಸಿ. ಇದ್ರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ಉತ್ತಮ ಆರೋಗ್ಯಕ್ಕಾಗಿ ಪ್ರತಿ ಹುಣ್ಣಿಮೆಯಂದು ಶಿವನ ದೇವಸ್ಥಾನಕ್ಕೆ ಹೋಗಿ, ಶಿವಲಿಂಗದ ಮುಂದೆ ಆರೋಗ್ಯವಾಗಿರಲು ಪ್ರಾರ್ಥಿಸಿ. ಬಡವರಿಗೆ ಹಣ್ಣುಗಳು, ಸಿಹಿ ತಿಂಡಿಗಳು ಮತ್ತು ಹಣವನ್ನು ದಾನ ಮಾಡಿ.
ಶುಕ್ಲಪಕ್ಷದ ಸೋಮವಾರ ಏಳು ತೆಂಗಿನಕಾಯಿ ತೆಗೆದುಕೊಂಡು ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಿ ನದಿಗೆ ತೆಂಗಿನಕಾಯಿ ಬಿಡಿ.